newsics.com
ತೆಲಂಗಾಣ: ಮದುವೆಯಾಗಲು ಹೆಣ್ಣು ಸಿಗುವುದಿಲ್ಲ ಎಂಬ ಮಾತನ್ನು ಕೇಳುತ್ತಲೇ ಬಂದಿದ್ದೇವೆ. ಯುವಕರ ಪಾಡು ಅಂತೂ ಕೇಳುವುದೇ ಬೇಡಾ.. ಕೈತುಂಬಾ ಸಂಬಳ ಇದ್ದರೂ ಹುಡುಗಿ ಸಿಗುತ್ತಿಲ್ಲ. ಇನ್ನೂ ಕೆಲವರು ಮದುವೆ ಬೇಡಾ ಅಂತಿದ್ದಾರೆ. ಆದರೆ ಇಲ್ಲೊಬ್ಬ ಇಬ್ಬರು ಲವರ್ಸ್ ಅನ್ನು ಮದ್ವೆಯಾಗಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆ ಲಿಂಗಾಪುರ ಮಂಡಲದ ಗುಮ್ನೂರ್ ಗ್ರಾಮದ ನಿವಾಸಿ ಸೂರ್ಯದೇವ್ ಇಬ್ಬರಿಗೂ ಒಟ್ಟಿಗೇ ತಾಳಿ ಕಟ್ಟಿದ್ದಾನೆ. . ಈ ಯುವಕನನ್ನು ಇಬ್ಬರೂ ಪ್ರೀತಿಸುತ್ತಿದ್ದರು. ಆತ ಇನ್ನೊಬ್ಬರನ್ನು ಪ್ರೀತಿಸುತ್ತಿರುವುದು ಗೊತ್ತಿಲ್ಲದ ಕಾರಣ, ಇಬ್ಬರೂ ಯುವಕನ ಬಲೆಗೆ ಬಿದ್ದಿದ್ದರು. ಆದರೆ ಕೊನೆಗೆ ವಿಷಯ ತಿಳಿದು, ಇಬ್ಬರು ಹುಡುಗಿಯರು ಒಪ್ಪಂದ ಮಾಡಿಕೊಂಡು ಒಂದೇ ಮಂಟಪದಲ್ಲಿ ಇಬ್ಬರನ್ನೂ ಮದುವೆಯಾಗಿದ್ದಾನೆ! ಬುಡಕಟ್ಟು ಪದ್ಧತಿಗಳನ್ನು ಅನುಸರಿಸಿ ಮತ್ತು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಒಂದೇ ಸಮಾರಂಭದಲ್ಲಿ ಇಬ್ಬರು ಮಹಿಳೆಯರನ್ನು ವಿವಾಹವಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಲಾಲ್ ದೇವಿ ಮತ್ತು ಜಲಕರ್ ದೇವಿ ಎಂಬ ಯುವತಿಯರು ಇವರು. ಇವರಿಬ್ಬರೂ ಬೇರೆ ಬೇರೆ ಗ್ರಾಮದವರು. ಮೂರು ವರ್ಷಗಳಿಂದ ಈ ಮಹಾನ್ ವ್ಯಕ್ತಿ ಗುಟ್ಟಾಗಿ ಇಬ್ಬರನ್ನೂ ಪ್ರೀತಿಸುತ್ತಿದ್ದದ. ಇವರಿಬ್ಬರನ್ನೂ ಬಿಟ್ಟಿರಲು ಅವನಿಂದ ಸಾಧ್ಯವಾಗಲಿಲ್ಲವಂತೆ. ನಂತರ ವಿಷಯವನ್ನು ಇಬ್ಬರಿಗೂ ತಿಳಿಸಿದಾಗ ಒಪ್ಪಂದಕ್ಕೆ ಬರಲಾಗಿದೆ. ಮೊದಲಿಗೆ ಸೂರ್ಯದೇವ್ ತನ್ನ ಕುಟುಂಬದವರನ್ನು ಒಪ್ಪಿಸಲು ಪ್ರಯತ್ನಿಸಿದ್ದ, ಆದರೆ ಇಬ್ಬರನ್ನು ಮದುವೆಯಾಗಲು ಊರಿನ ಜನರು ಒಪ್ಪಿರಲಿಲ್ಲ. ಆದರೂ ಈತ ಛಲ ಬಿಡಲಿಲ್ಲ. ತನ್ನ ಕುಟುಂಬ, ಗ್ರಾಮದ ಹಿರಿಯರು ಹಾಗೂ ಹುಡುಗಿಯರ ಮನೆಯವರನ್ನು ಒಪ್ಪಿಸಿ ಇಬ್ಬರನ್ನೂ ಮದುವೆಯಾಗಿದ್ದಾನೆ.