newsics.com
ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯನ್ನ ಕಾಡ್ತಿರೋ ಅತಿ ದೊಡ್ಡ ಸಮಸ್ಯೆ ಅಂದ್ರೆ ಟ್ರಾಫಿಕ್ ಜಾಮ್.. ಬೆಳ್ಳಗ್ಗೆ ಆದ್ರೆ, ಆಫೀಸ್ಗೆ ಹೋಗಕ್ಕಾಗಲ್ಲ. ಸಂಜೆ ಆದ್ರೆ ಮನೆಗೆ ಬರೋಕ್ಕಾಗಲ್ಲ ಅನ್ನೋ ಕಂಪ್ಲೇಟ್. ಇನ್ನೂ ಡೆಲಿವರಿ ಮಾಡುವವರ ಗೋಳು ಕೇಳುವುದೇ ಬೇಡಾ. ಸರಿಯಾದ ಸಮಯಕ್ಕೆ ಆರ್ಡರ್ ತಲುಪಿಸದಿದ್ದರೆ ಬೈಗಳು ತಪ್ಪಿದ್ದಲ್ಲ. ಇನ್ನೂ ಯಾವುದರು ಔಷಧಿಗಳು ಮತ್ತು ಲ್ಯಾಬ್ ವರದಿಗಳನ್ನು ಮುಟ್ಟಿಸಬೇಕೆಂದರೂ ಕಷ್ಟ. ಆದರೆ ಇನ್ಮುಂದೆ ಆ ಸಮಸ್ಯೆ ಇಲ್ಲ.
ಹೌದು, ಔಷಧಿಗಳು ಮತ್ತು ಲ್ಯಾಬ್ ವರದಿಗಳನ್ನು ತಲುಪಿಸಲು ಡ್ರೋನ್‌ಗಳನ್ನು ಬಳಸಲಾಗುತ್ತದೆ.
ನಗರದ ಮೂರು ಆಸ್ಪತ್ರೆಗಳು ಘೋಷಿಸಿದ ಸುಮಾರು ಮೂರು ವರ್ಷಗಳ ನಂತರ, ಐಟಿ ಹಬ್ ಅಂತಿಮವಾಗಿ ವಾಣಿಜ್ಯ ಡ್ರೋನ್ ವಿತರಣಾ ಸೇವೆಯನ್ನು ಪಡೆದಿದ್ದು,ಈ ಸೇವೆ ಈಗಾಗಲೇ ಕೋಣನಕುಂಟೆ ಮತ್ತು ಕನಕಪುರ ರಸ್ತೆ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ದೆಹಲಿ ಮೂಲದ ಹೈಪರ್‌ಲೋಕಲ್ ಡ್ರೋನ್ ವಿತರಣಾ ಜಾಲವಾದ ಸ್ಕೈ ಏರ್‌ನ ಸ್ಥಾಪಕ ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅಂಕಿತ್ ಕುಮಾರ್ ತಿಳಿಸಿದ್ದಾರೆ.
ಏಳು ನಿಮಿಷಗಳಲ್ಲಿ ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಿಸಬಹುದು. ಅತಿ ವೇಗದ ಡ್ರೋನ್ ಡೆಲಿವರಿ ಸೇವೆಯನ್ನು ಮೊದಲು ಆರಂಭ ಮಾಡಿತ್ತು. ಮೊದಲ ವಾಣಿಜ್ಯ ಡ್ರೋನ್ ಡೆಲಿವರಿ ಸರ್ವೀಸ್ ಗುರುಗ್ರಾಮ್ ಸೆಕ್ಟರ್ 92 ರಲ್ಲಿ ನಡೆದಿತ್ತು. ಇದು ಸಾಮಾನ್ಯ ರಸ್ತೆ ಮಾರ್ಗವಾದ 15 ನಿಮಿಷಗಳ ಬದಲು ಕೇವಲ 3-4 ನಿಮಿಷಗಳಲ್ಲಿ 7.5 ಕಿ.ಮೀ. ಕ್ರಮಿಸಿತು.
ಕಳೆದ ಒಂದು ವರ್ಷದಲ್ಲಿ ನಾವು ಗುರುಗ್ರಾಮ್‌ನಲ್ಲಿ 1 ಮಿಲಿಯನ್ ಡೆಲಿವರಿಗಳನ್ನು ಮಾಡಿದ್ದೇವೆ.ಇದು ಬೆಂಗಳೂರಿಗೆ ಸೇವೆಯನ್ನು ವಿಸ್ತರಿಸಲು ನಮಗೆ ಅವಕಾಶ ಮಾಡಿಕೊಟ್ಟಿತು” ಎಂದು ಕುಮಾರ್ ತಿಳಿಸಿದ್ದಾರೆ.
https://www.newsics.com/2025/03/29/a-young-man-tied-two-people-together-in-the-same-hall/