newsics.com
ಲಕ್ನೋ : ಪತ್ನಿಯ ಅಕ್ರಮ ಸಂಬಂಧ ತಿಳಿದ ಪತಿ ಆಕೆಯನ್ನು ಪ್ರಿಯಕರನ ಜೊತೆ ಮದುವೆ ಮಾಡಿಸಿದ ಘಟನೆ ಉತ್ತರಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ನಡೆದಿದೆ.
2017ರಲ್ಲಿ ಬಬ್ಲೂ ಹಾಗೂ ರಾಧಿಕಾ ವಿವಾಹವಾಗಿದ್ದು, ದಂಪತಿಗೆ ಏಳು ಹಾಗೂ ಒಂಬತ್ತು ವರ್ಷದ ಇಬ್ಬರು ಮಕ್ಕಳಿದ್ದಾರೆ. ಆದರೆ ರಾಧಿಕಾ ಅದೇ ಹಳ್ಳಿಯ ಓರ್ವ ಯುವಕನನ್ನು ಇಷ್ಟಪಡಲು ಪ್ರಾರಂಭಿಸಿದ್ದಳು. ಬಳಿಕ ಇದು ಪ್ರೀತಿಗೆ ತಿರುಗಿ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು.
ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಗಂಡ ರಾಧಿಕಾಗೆ ಒಂದು ಆಯ್ಕೆ ನೀಡಿದನು. ಪ್ರಿಯಕರ ಅಥವಾ ಪತಿ ಎಂಬ ಆಯ್ಕೆ ನೀಡಿದಾಗ ರಾಧಿಕಾ ಪ್ರಿಯಕರನನ್ನು ಆರಿಸಿಕೊಂಡಳು. ಇದನ್ನು ಒಪ್ಪಿದ ಬಬ್ಲೂ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ.
ಇನ್ನು ತನ್ನ ಎರಡು ಮಕ್ಕಳನ್ನು ತಾನೇ ನೋಡಿಕೊಳ್ಳುವುದಾಗಿ ಬಬ್ಲೂ ತಿಳಿಸಿದ್ದಾನೆ.