newsics.com
ಸೌತ್ ಬ್ಯೂಟಿ ಸಮಂತಾ ಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದಾರೆ. ವಿಚ್ಛೇದನದ ಬಳಿಕ ಅನಾರೋಗ್ಯ ಸಮಸ್ಯೆ ಎದುರಿಸಿದರು. ಈ ಕಾರಣದಿಂದಲೇ ಅವರಿಗೆ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಲೇ ಇಲ್ಲ. ಇನ್ನು ಸಮಂತಾ ‘ಟ್ರಲಾಲಾ ಮೂವಿಂಗ್ ಪಿಕ್ಚರ್’ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ಗೊತ್ತೇ ಇದೆ.
ಈ ಬ್ಯಾನರ್ ಅಡಿಯಲ್ಲಿ ‘ಮಾ ಉಂಟಿ ಬಂಗಾರಮ್’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದರು. ಈ ಚಿತ್ರದಲ್ಲಿ ಸಮಂತಾ ಅವರೇ ನಟಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರದ ನಿರ್ದೇಶಕರು ಹಾಗೂ ಇತರ ಪಾತ್ರವರ್ಗದ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಈ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಈಗ ಇದೇ ನಿರ್ಮಾಣ ಸಂಸ್ಥೆ ಅಡಿ ಮೂಡಿ ಬಂದ ಮತ್ತೊಂದು ಸಿನಿಮಾ ಬಿಡುಗಡೆ ಕಾಣುತ್ತಿದೆ.
ವಸಂತ್ ಮರಿನ್ಕಂಡಿ ಮತ್ತು ಪ್ರವೀಣ್ ಒಟ್ಟಾಗಿ ನಿರ್ದೇಶಿಸಿದ ‘ಶುಭಂ’ ಸಿನಿಮಾ ರೆಡಿ ಆಗಿದೆ. ಈ ಮೊದಲು ಇಬ್ಬರೂ ‘ಸಿನಿಮಾ ಬಂಡಿ’ ಹೆಸರಿನ ಚಿತ್ರ ಮಾಡಿದ್ದರು. ಈಗ ಹೊಸ ತಂಡದೊಂದಿಗೆ ಮಾಡಿದ ‘ಶುಭಂ’ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿಕೊಂಡಿದೆ.
ಸಮಂತಾ ಅವರು ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಈ ಸಿನಿಮಾ ಮೇ ವೇಳೆಗೆ ರಿಲೀಸ್ ಆಗುವ ಸಾಧ್ಯತೆ ಇದೆ. ಸಿನಿಮಾದ ಟ್ರೇಲರ್ ರಿಲೀಸ್ ಆದ ಬಳಿಕವೇ ಈ ಚಿತ್ರ ಯಾವ ರೀತಿಯಲ್ಲಿ ಮೂಡಿ ಬಂದಿದೆ ಎಂಬ ಮಾಹಿತಿ ಲಭ್ಯವಾಗಲಿದೆ.