newsics.com
ಬಾಲಿವುಡ್ ನಟ ಶಾಹೀದ್ ಕಪೂರ್ ಮತ್ತು ನಟಿ ಕರೀನಾ ಕಪೂರ್ ಖಾನ್ ಅವರು ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ.
ಜಬ್ ವಿ ಮೆಟ್ ನಲ್ಲಿನ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಲವ್ ಕೆಮೆಸ್ಟ್ರಿ ಯನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಆ ಸಮಯದಲ್ಲಿ, ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳೂ ಇದ್ದವು.
ಅಷ್ಟೇ ಅಲ್ಲ, ಈ ಜೋಡಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಈ ಜೋಡಿ ಬೇರ್ಪಟ್ಟರು. ಅದಾಗಿ 18 ವರ್ಷಗಳ ಬಳಿಕ ಇದೀಗ ಈ ಜೋಡಿ ಮತ್ತೊಮ್ಮೆ, ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಜೈಪುರದಲ್ಲಿ ನಡೆಯುತ್ತಿರುವ IIFA ಕಾರ್ಯಕ್ರಮದಲ್ಲಿ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ತಾರೆಯರಾದ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅವಾರ್ಡ್ ನೈಟ್ ಮೊದಲು ಪತ್ರಿಕಾಗೋಷ್ಠಿಯಲ್ಲಿ ಜೊತೆಯಾಗಿ ಸಮಯ ಕಳೆದಿರೋದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಮಾತನಾಡಿದ್ದು, ಕೈ ಕೈ ಕುಲುಕಿದ್ದು, ಹಗ್ ಕೂಡ ಮಾಡಿದ್ದಾರೆ. ಜೊತೆಗೆ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
IIFA ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸುತ್ತಿರುವ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಮತ್ತು ನಟ ಕಾರ್ತಿಕ್ ಆರ್ಯನ್ ವೇದಿಕೆಯಲ್ಲಿ ಅವರೊಂದಿಗೆ ಸೇರಿಕೊಂಡರು. ಮಾರ್ಚ್ 9 ರಂದು, ಶಾಹಿದ್ ಕಪೂರ್ ಮುಖ್ಯ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲಿರುವ ಮುಖ್ಯ ಕಲಾವಿದರಲ್ಲಿ ಒಬ್ಬರು, ಕರೀನಾ ಕಪೂರ್ ಖಾನ್ ತಮ್ಮ ಮುತ್ತಜ್ಜ ರಾಜ್ ಕಪೂರ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ, ಅವರ ಸಿನಿ ಪರಂಪರೆಯ 100 ವರ್ಷಗಳನ್ನು ಈ ಸಮಾರಂಭದಲ್ಲಿ ಸೆಲೆಬ್ರೇಟ್ ಮಾಡಲಾಗುತ್ತೆ .
https://www.instagram.com/reel/DG7nTfQs1Qt/?igsh=Z3hjZHpkOWl0d2tu
ಕರೀನಾ ಅವರ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಹೀದ್, ಇದರಲ್ಲಿ ಅಂತಹ ವಿಶೇಷವೇನು ಇಲ್ಲ. ‘ಸಾಮಾನ್ಯವಾಗಿ ನಾವಿಬ್ಬರೂ ಭೇಟಿಯಾಗುತ್ತಲೇ ಇರುತ್ತೇವೆ. ಇದು ಹೊಸತೇನಲ್ಲ…ಇವತ್ತು ವೇದಿಕೆಯಲ್ಲಿ ಭೇಟಿಯಾಗಿದ್ದೇವೆ. ಹಾಗೆಯೇ ಅಲ್ಲಿ-ಇಲ್ಲಿ ಸಾಮಾನ್ಯವಾಗಿ ಭೇಟಿಯಾಗುತ್ತೇವೆ’ ಎಂದಿದ್ದಾರೆ.