newsics.com
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಸ್ಮಾರ್ಟ್ಫೋನ್‌ಗಳಿಗೆ ಹೆಚ್ಚು ಅಡಿಕ್ಟ್ ಆಗಿದ್ದಾರೆ. ದಿನದ ಹೆಚ್ಚಿನ ಸಮಯ ಫೋನನ್ನು ಉಪಯೋಗಿಸುತ್ತಲೇ ಇರುತ್ತಾರೆ. ಬಳಕೆದಾರರನ್ನು ಆಕರ್ಷಿಸಲು ಟೆಲಿಕಾಂ ಸಂಸ್ಥೆ ಮತ್ತು ಮೊಬೈಲ್ ಕಂಪನಿಗಳು ಕೆಲವು ಹೊಸ ನವೀಕರಣಗಳು ಅಥವಾ ವೈಶಿಷ್ಟ್ಯಗಳು ಮಾರುಕಟ್ಟೆಗೆ ಪರಿಚಯಿಸುತ್ತವೆ. ಇದರಲ್ಲಿ ನಿಮ್ಮ ಹೆಸರಿನ ಕಾಲರ್ ಟ್ಯೂನ್ ಫೀಚರ್ ಕೂಡ ಒಂದು.
ಇತ್ತೀಚಿನ ದಿನಗಳಲ್ಲಿ ನೀವು ಯಾರಿಗಾದರು ಕರೆ ಮಾಡುವಾಗ ರಿಂಗ್ ಆಗುವ ಬದಲು ಅವರ ಹೆಸರು ಕಾಲರ್ ಟ್ಯೂನ್ನಲ್ಲಿ ಕೇಳಿಸುತ್ತದೆ. ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿಲ್ಲ.
ನಿಮ್ಮ ಹೆಸರಿನ ಕಾಲರ್ ಟ್ಯೂನ್ ಅನ್ನು ಹೊಂದಿಸಲು ನೀವು ಹೆಚ್ಚು ಕಷ್ಟಪಡಬೇಕಿಲ್ಲ. ಇದಕ್ಕಾಗಿ ನೀವು ಕೇವಲ ಜಿಯೋ ಬಳಕೆದಾರರಾಗಿರಬೇಕು ಮತ್ತು ನಿಮ್ಮ ಫೋನ್‌ನಲ್ಲಿ My Jio ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿರುವುದು ಅವಶ್ಯಕ.
ನಿಮ್ಮ ಹೆಸರಿನ ಕಾಲರ್ ಟ್ಯೂನ್ ಅನ್ನು ಈ ರೀತಿ ಆಯ್ಕೆ ಮಾಡಿ:
- MyJio ಅಪ್ಲಿಕೇಶನ್ ಅನ್ನು ತೆರೆದು ಮೆನೂ ಆಯ್ಕೆಯಲ್ಲಿ ತೋರಿಸಿರುವ JioTunes ಮೇಲೆ ಕ್ಲಿಕ್ ಮಾಡಿ.
- ನಂತರ, ಜಿಯೋ ಟ್ಯೂನ್ಸ್ನ ಪೇಜ್ ನಿಮ್ಮ ಮುಂದೆ ತೆರೆಯುತ್ತದೆ, ಇಲ್ಲಿ ನೇಮ್ ಜಿಯೋ ಟ್ಯೂನ್ಸ್, ಆರ್ಟಿಸ್ಟ್ ಜಿಯೋ ಟ್ಯೂನ್ಸ್ ಮತ್ತು ಟಾಪ್ ಜಿಯೋ ಟ್ಯೂನ್ಸ್ ಎಂದ ಮೂರು ಆಯ್ಕೆ ಕಾಣಿಸುತ್ತದೆ.
- ಇಲ್ಲಿ ನೀವು ನೇಮ್ JioTune ಪುಟ ತೆರೆದ ನಂತರ, ನಿಮ್ಮ ಹೆಸರನ್ನು ಬರೆದು ಸರ್ಚ್ ಕೊಡಬೇಕು. ಆಗ ನಿಮ್ಮ ಹೆಸರಿರುವ ಅನೇಕ ಪಟ್ಟಿ ಕಾಣಿಸುತ್ತದೆ. ಇಲ್ಲಿ ನಿಮ್ಮ ಹೆಸರಿನ ಜಿಯೋ ಟ್ಯೂನ್ ಬರುತ್ತದೆ.
- ವಿಭಿನ್ನ ಧ್ವನಿಗಳು ಮತ್ತು ಭಾಷೆಗಳಲ್ಲಿ ನಿಮ್ಮ ಹೆಸರನ್ನು ಟ್ಯೂನ್ ಮಾಡಲು ಇಲ್ಲಿ ನೀವು ಆಯ್ಕೆಗಳನ್ನು ಪಡೆಯುತ್ತೀರಿ. ನಿಮ್ಮ ಆಯ್ಕೆಯ ಟ್ಯೂನ್ ಅನ್ನು ಸೆಲೆಕ್ಟ್ ಮಾಡಿ ಮತ್ತು ಸೆಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಆಯಿತು.
- ಈ ಪ್ರಕ್ರಿಯೆಯನ್ನು ಅನುಸರಿಸಿದ ನಂತರ, ಯಾರಾದರೂ ನಿಮ್ಮ ಫೋನ್‌ಗೆ ಕರೆ ಮಾಡಿದಾಗ, ಅವರು ನಿಮ್ಮ ಹೆಸರಿನ ಕಾಲರ್ ಟ್ಯೂನ್ ಅನ್ನು ಕೇಳುತ್ತಾರೆ.
- ಇದು ಬೇಡ ಎಂದಾದಲ್ಲಿ ಡಿ-ಆ್ಯಕ್ಟಿವೆಟ್ ಮಾಡುವ ಆಯ್ಕೆ ಕೂಡ ಅಲ್ಲೇ ನೀಡಲಾಗಿದೆ