newsics.com
ಚಿನ್ನದ ಬೆಲೆ ಸತತವಾಗಿ ಇಳಿಮುಖವಾಗಿದೆ. ಎರಡು ದಿನ ಸತತ ಏರಿಕೆ ಬಳಿಕ ಎರಡು ದಿನ ಸತತವಾಗಿ ಇಳಿಕೆಯಾಗಿದೆ. ನಿನ್ನೆ 45 ರೂ ಇಳಿಕೆಯಾಗಿದ್ದ ಚಿನ್ನದ ಬೆಲೆ ಇವತ್ತು ಶುಕ್ರವಾರ 30 ರೂ ಕಡಿಮೆ ಆಗಿದೆ.
ಇಂದು ಶುಕ್ರವಾರ ಚಿನ್ನದ ಬೆಲೆ ಇಳಿಕೆಯಾದರೆ, ಬೆಳ್ಳಿ ಬೆಲೆ ತುಸು ಏರಿಕೆ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 8,020 ರೂ ಇದ್ದದ್ದು 7,990 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 8,716 ರೂಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 98 ರೂ ಇದ್ದದ್ದು 99 ರೂಗೆ ಏರಿದೆ. ಚೆನ್ನೈ ಮೊದಲಾದೆಡೆ ಬೆಳ್ಳಿ ಬೆಲೆ 108 ರೂಗೆ ಏರಿಕೆ ಆಗಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 07ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 79,900 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,160 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,380 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 79,900 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,160 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ