newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಫಾಲ್ಗುಣ ಮಾಸ ಶುಕ್ಲ ಪಕ್ಷ ಷಷ್ಠಿ
05-03-2025, ಬುಧವಾರ
# ಸ್ವಾತಂತ್ರ್ಯ ವೀರ ಸಾವರ್ಕರ್ ಪುಣ್ಯತಿಥಿ (ತಿಥಿಗನುಸಾರ)
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 05/03/2025
ತಿಂಗಳು – ಮಾರ್ಚ್
ಬಣ್ಣ – ಹಸಿರು
ವಾರ – ಬುಧವಾರ
ತಿಥಿ – ಷಷ್ಠಿ 12:50:50
ಪಕ್ಷ – ಶುಕ್ಲ
ನಕ್ಷತ್ರ – ಕೃತ್ತಿಕಾ 25:07:22*
ಯೋಗ. – ವೈಧೃತಿ 23:06:01
ಕರಣ – ತೈತುಲ 12:50:49
ಕರಣ – ಗರಜ 23:47:17
ತಿಂಗಳು (ಅಮಾವಾಸ್ಯಾಂತ್ಯ). ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ) ಫಾಲ್ಗುಣ
ಚಂದ್ರ ರಾಶಿ – ಮೇಷ till 08:12:03
ಚಂದ್ರ ರಾಶಿ – ವೃಷಭ from 08:12:03
ಸೂರ್ಯ ರಾಶಿ – ಕುಂಭ
ಋತು – ಶಿಶಿರ
ಸೂರ್ಯೋದಯ 06:34:18
ಸೂರ್ಯಾಸ್ತ 18:27:55
ಹಗಲಿನ ಅವಧಿ 11:53:36
ರಾತ್ರಿಯ ಅವಧಿ 12:05:48
ಚಂದ್ರೋದಯ 10:32:12
ಚಂದ್ರಾಸ್ತ 23:51:40
ರಾಹು ಕಾಲ 12:34 – 14:01 ಅಶುಭ
ಯಮಘಂಡ ಕಾಲ 08:13 – 09:40 ಅಶುಭ
ಗುಳಿಕ ಕಾಲ 11:07 – 12:34
ಅಭಿಜಿತ್ 12:11 – 12:57 ಅಶುಭ
ದುರ್ಮುಹೂರ್ತ 12:11 – 12:57 ಅಶುಭ
—
ಇಂದಿನ ಮಾತು
ನಮಗೆ ಹತ್ತಾರು ಭಾಷೆಗಳು ಮಾತನಾಡಲು ಬರಬಹುದು. ಆದರೆ ಮತ್ತೊಬ್ಬರ ಮನಸ್ಸಿಗೆ ನೋವಾಗದ ರೀತಿ ಮಾತನಾಡಲು ದೈವ ಕೃಪೆ ಬೇಕು.
—
The Soul always know
How to heal itself…
The challenge is….
How to silence the Mind.
—
ಇಂದಿನ ಸುಭಾಷಿತ
ಸರ್ವಸ್ಯೈವ ಹಿ ಶಾಸ್ತ್ರಸ್ಯ
ಕರ್ಮಣೋ ವಾಽಪಿ ಕಸ್ಯಚಿತ್ ।
ಯಾವತ್ ಪ್ರಯೋಜನಂ ನೋಕ್ತಂ
ತಾವತ್ ತತ್ ಕೇನ ಗೃಹ್ಯತೇ ।।
(ಶ್ಲೋಕವಾರ್ತಿಕ)
ಎಲ್ಲಾ ಶಾಸ್ತ್ರಗಳಿಗೂ, ಎಲ್ಲಾ ಕರ್ಮಗಳಿಗೂ ಪ್ರಯೋಜನವನ್ನು ಹೇಳಬೇಕು. ಇಲ್ಲವಾದರೆ ಅವುಗಳನ್ನು ಯಾರೂ ಗ್ರಹಿಸುವುದಿಲ್ಲ.
—
ಇಂದಿನ ಪದಾರ್ಥ
ಅತಿಸಭ್ಯ = Very Polite
ಅತಿಶಕ್ತಿತೆ = Great power or valour
ಅಜಗಂಧಿ = Smelling like a goat
ಅಜನ = instigating
—
ಇಂದಿನ ಓದು
ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || 5 ||
37) ಸ್ವಯಂಭೂಃ
ಸ್ವಯಂಭೂಃ ಅಂದರೆ ತಾನೇ ತಾನಾಗಿ ಪೂರ್ಣವಾಗಿರುವವನು, ತನ್ನಿಂದ ತಾನೆ ಆವಿರ್ಭೂತನಾಗುವವನು.
ನಮ್ಮ ಪೂರ್ಣತೆ ಇನ್ನೊಬ್ಬರು ಕೊಟ್ಟರೆ ಮಾತ್ರ, ಆದರೆ ಭಗವಂತ ಸ್ವಯಂಪೂರ್ಣ. ಭಗವಂತ ಅವತರಿಸಲು ಯಾರು ಕಾರಣ? ಅವನು ಹುಟ್ಟಿ ಬರುವುದಕ್ಕೆ ಯಾರೂ ಕಾರಣರಲ್ಲ. ಆತನು ಸ್ವಯಂಭೂಃ, ಅಂದರೆ ತಾನೇ ತಾನಾಗಿ ಹುಟ್ಟಿ ಬರುವವನು. ಭಕ್ತರ ಬಯಕೆ ಈಡೇರಿಸಲು ಸ್ವಯಂಇಚ್ಛೆಯಿಂದ ಅವತರಿಸಿ ಬರುತ್ತಾನೆ.
ಭಗವಂತ ಜ್ಞಾನದಿಂದ ಜ್ಞಾನದಂತೆ, ದೀಪದಿಂದ ದೀಪದಂತೆ. ಒಂದು ದೀಪದಿಂದ ಇನ್ನೊಂದು ದೀಪ ಹಚ್ಚಿದರೆ ಮೂಲ ದೀಪದ ಪ್ರಕಾಶ ಕಡಿಮೆ ಆಗುವುದಿಲ್ಲ.ಭಗವಂತ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಅಭಿವ್ಯಕ್ತ ಆಗುತ್ತಾ ಹೋಗುತ್ತಾನೆ. ಆದರೆ ಮೂಲವೂ ಪೂರ್ಣ, ಮೂಲದಿಂದ ಬಂದ ಅವತಾರವೂ ಪೂರ್ಣ.
ಈ ರೀತಿ ಅವತಾರಕ್ಕೆ ಮೊದಲೂ ಪೂರ್ಣತೆಯಲ್ಲಿದ್ದು, ಅವತಾರದಲ್ಲೂ ಪೂರ್ಣವಾಗಿ, ಅವತಾರದ ನಂತರ ಮತ್ತೆ ಹೋಗಿ ಪೂರ್ಣತೆಯಲ್ಲೇ ಉಳಿಯುವ ಭಗವಂತ ಸ್ವಯಂಭೂಃ.
—
ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || 5 ||
38) ಶಂಭುಃ
ಶಂ-ಭವತಿ’ ಎಂದರೆ ಆನಂದ ರೂಪ, ‘ಶಂ-ಭವತಿ ಅನೇನ’ ಎಂದರೆ ಆನಂದ ಕೊಡುವವನು ಎಂದರ್ಥ. ಇಲ್ಲಿ ‘ಶಂ’ ಎಂದರೆ ಆನಂದ. ಉದಾಹರಣೆಗೆ “ಹರಿಃ ಓಮ್, ಶಂ ನೋ ಮಿತ್ರಃ, ಶಂ ವರುಣಃ, ಶಂ ನೋ ಭವತ್ವರ್ಯಮಾ, ಶಂ ನೋ ಇಂದ್ರೋ ಬೃಹಸ್ಪತಿಃ, ಶಂ ನೋ ವಿಷ್ಣುರುರುಕ್ರಮಃ” ಇಲ್ಲಿ ಶಂ ಎನ್ನುವ ಪದವನ್ನು ಆನಂದಮಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಎಲ್ಲಾ ಶಾಸ್ತ್ರಗಳೂ ಭಗವಂತನನ್ನು ಆನಂದಮಯನೆಂದು ಹೇಳುತ್ತವೆ. ಯಾರು ಸ್ವಯಂ ಆನಂದಮಯನೋ , ಯಾರು ಎಲ್ಲರಿಗೂ ಆನಂದವನ್ನು ಕೊಡಬಲ್ಲನೋ ಅವನು ಶಂಭು.
39) ಆದಿತ್ಯಃ
ಆದಿತ್ಯ ಅಂದರೆ ಅದಿತಿಯ ಮಗ ಎಂಬುದು ಒಂದು ಅರ್ಥ. ಅದಿತಿ ಕಶ್ಯಪ ಮಹರ್ಷಿಯ ಪತ್ನಿ ಹಾಗೂ ದೇವತೆಗಳ ತಾಯಿ. ಅದಿತಿಗೆ ಹನ್ನೆರಡು ಮಕ್ಕಳು. ಅವರನ್ನು ದ್ವಾದಶಾದಿತ್ಯರು ಎಂದು ಕರೆಯುತ್ತಾರೆ. ವಿವಸ್ವಾನ್ , ಆರ್ಯಮಾನ್, ಪೂಷನ್, ತ್ವಷ್ಟೃ, ಸವಿತೃ, ಭಗ, ದಾತ, ವಿಧಾತ, ವರುಣ, ಮಿತ್ರ , ಶಕ್ರ, ಉರುಕ್ರಮ -ಇವರೇ ಆ ಹನ್ನೆರಡು ಆದಿತ್ಯರು. ಈ ಹನ್ನೆರಡು ದೇವತೆಗಳೇ ವರ್ಷದ ಹನ್ನೆರಡು ಮಾಸದ ದೇವತೆಗಳು. ಇವರಲ್ಲಿ ಒಬ್ಬ ಸೂರ್ಯ, ಒಬ್ಬ ವರುಣ, ಮತ್ತೊಬ್ಬ ಮಿತ್ರ, ಮತ್ತೊಬ್ಬ ಇಂದ್ರ, ಹಾಗೇ ಕೊನೇ ಮಗನೇ ವಾಮನ ರೂಪಿ ವಿಷ್ಣು. ಅವನು ಎಲ್ಲರಿಗಿಂತ ಕೊನೆಗೆ ಹುಟ್ಟಿದರೂ, ಆತ ಆದಿಯಲ್ಲಿ ಇದ್ದವನು. ಆದ್ದರಿಂದ ಆತ ಆದಿತ್ಯಃ. ಅವನು ಆದಿ+ತಿ+ಯ ಅಂದರೆ ಆದಿಯಲ್ಲಿ ಜ್ಞಾನಾನಂದ ಸ್ವರೂಪನಾಗಿದ್ದವ, ಎಲ್ಲಕ್ಕೂ ಕಾರಣಕರ್ತ. ಇಷ್ಟೇ ಅಲ್ಲದೆ ಸೂರ್ಯ ಮಂಡಲದಲ್ಲಿ (ಆದಿತ್ಯನಲ್ಲಿ) ಸನ್ನಿಹಿತನಾಗಿರುವ ಭಗವಂತನನ್ನು ಆದಿತ್ಯಃ ಎನ್ನುತ್ತಾರೆ.
***