newsics.com
ಚಾಮರಾಜನಗರ: ಬಂಡೀಪುರದಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರು ಮೂಲದ ಕುಟುಂಬವೊಂದು ನಿಗೂಢವಾಗಿ ನಾಪತ್ತೆಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಗಂಡ, ಹೆಂಡ್ತಿ ಮಗ ಮೂವರು ಕಾಣೆಯಾಗಿದ್ದಾರೆ. 40 ವರ್ಷದ ಜೆ. ನಿಶಾಂತ್ ಅವರು ಪತ್ನಿ ಮತ್ತು 10 ವರ್ಷದ ಮಗುವಿನೊಂದಿಗೆ ಬಂಡೀಪುರದ ಕಂಟ್ರಿ ಕ್ಲಬ್ ರೆಸಾರ್ಟ್‌ನಲ್ಲಿ ಭಾನುವಾರ ರಾತ್ರಿ ತಂಗಿದ್ದರು. ಸೋಮವಾರ ಬೆಳಿಗ್ಗೆ ಕಾರಿನಲ್ಲಿ ರೆಸಾರ್ಟ್‌ನಿಂದ ಹೊರಟ ಕುಟುಂಬ ಮತ್ತೆ ಕಾಣಿಸಿಕೊಂಡಿಲ್ಲ. ಕುಟುಂಬದ ಲಗೇಜ್ ಇನ್ನೂ ರೆಸಾರ್ಟ್‌ನಲ್ಲಿಯೇ ಇದೆ.
ಬಂಡೀಪುರ – ಮಂಗಲ ರಸ್ತೆಯಲ್ಲಿ ಕುಟುಂಬ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅಪಹರಣವಾಗಿರುವ ಸಾಧ್ಯತೆಯೂ ಇದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.