newsics.com
ಸಂಬಂಧಗಳು ಚೆನ್ನಾಗಿರಬೇಕು ಎಂದಾದರೆ ಸಂಗಾತಿಗಳು ಕೂಡ ಖುಷಿಯಾಗಿ ಪರಸ್ಪರ ಪ್ರೀತಿ ತೋರುವ ವ್ಯಕ್ತಿಗಳಾಗಿರಬೇಕು. ಇಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗಿರಬೇಕು ಸುಖ ದುಃಖಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಆದರೆ ಒಮ್ಮೊಮ್ಮೆ ಸಂಬಂಧದಲ್ಲಿ ಬರುವ ಅಪಸ್ವರಗಳಿಂದ ಈ ನಂಬಿಕೆ ವಿಶ್ವಾಸ ಕಳೆದುಹೋಗುತ್ತದೆ. ನಿಮ್ಮ ಸಂಗಾತಿ ಜೊತೆ ಸಂಬಂಧ ಗಟ್ಟಿಯಾಗಲು ಈ ಟಿಪ್ಸ್ ಫಾಲೋ ಮಾಡಿ
ಸಂಗಾತಿಯ ಜೊತೆ ಮಾತುಕತೆ
ನಿಮ್ಮ ಭಾವನೆಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೆ ಹಂಚಿಕೊಳ್ಳಿ. ಹಾಗೇನೇ ಸಂಗಾತಿಯ ಮಾತುಗಳನ್ನು ಶ್ರದ್ದೆಯಿಂದ ಕೇಳಿ. ಸಮಸ್ಯೆಗಳ ಬಗ್ಗೆ ತಾತ್ಕಾಲಿಕವಾಗಿ ಶಾಂತಿಯುತವಾಗಿ ಚರ್ಚಿಸಿ.
ನಂಬಿಕೆ ಮತ್ತು ಪ್ರಾಮಾಣಿಕತೆ
ಯಾವುದೇ ರಹಸ್ಯವನ್ನು ಇಬ್ಬರ ನಡುವೆ ಇಡಬೇಡಿ, ಸ್ಪಷ್ಟತೆಯೊಂದಿಗೆ ಮಾತನಾಡಿ. ನಂಬಿಕೆಗೆ ಧಕ್ಕೆಯಾಗುವ ಯಾವುದೇ ನಡವಳಿಕೆಯಿಂದ ದೂರವಿರಿ.
ಸಂಗಾತಿಯೊಂದಿಗೆ ಸಮಯ ಕಳೆಯಿರಿ
ಒಟ್ಟಿಗೆ ಸಮಯ ಕಳೆಯುವುದು ಸಂಬಂಧವನ್ನು ಗಟ್ಟಿಯಾಗಿಸುತ್ತದೆ. ಪ್ರವಾಸ, ಮನರಂಜನೆ, ಹವ್ಯಾಸಗಳಿಗೆ ಒಟ್ಟಿಗೆ ಕಾಲ ಹರಣ ಮಾಡುವುದ ಕಲಿತುಕೊಳ್ಳಿ.
ಗೌರವ ಮತ್ತು ಸಹನೆ
ಪರಸ್ಪರ ಗೌರವವು ಮುಖ್ಯ, ಕಠಿಣ ಸಂದರ್ಭಗಳಲ್ಲಿಯೂ ಸಹ ಸದಭಿಪ್ರಾಯ ಉಳಿಸಿಕೊಳ್ಳಿ. ಸಂಗಾತಿಯ ಅಭಿರುಚಿ ಮತ್ತು ಅಭಿಪ್ರಾಯಗಳನ್ನು ಗೌರವಿಸಿರಿ.
ಈ ನಿಟ್ಟಿನಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಸಹಕಾರ ಉತ್ತಮ ಸಂಬಂಧಕ್ಕೆ ನೆರವಾಗಬಹುದು.