newsics.com
ನವದೆಹಲಿ: ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆದ ವಿಡಿಯೋದಲ್ಲಿ ಎರಡು AI ಡಿವೈಸ್‌ಗಳು ಸಂವಹನ ನಡೆಸುತ್ತಿವೆ. ಮದುವೆಗೆ ಹೋಟೆಲ್ ಬುಕ್ ಮಾಡಲು ಕರೆ ಮಾಡಿದಾಗ, ಅವುಗಳ ಸಂಭಾಷಣೆ ಜಗತ್ತಿಗೆ ಭಯ ಹುಟ್ಟಿಸಿದೆ. ಇದು ಭವಿಷ್ಯದ ಅಪಾಯದ ಬಗ್ಗೆ ಆತಂಕ ಮೂಡಿಸಿದೆ.
ವಿಡಿಯೋ ಕ್ಲಿಪ್‌ನ್ನು @artificialintelligencenews.in ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಹೋಟೆಲ್‌ಗೆ ಕಾಲ್ ಮಾಡುವ AI ಡಿವೈಸ್ ಮದುವೆಗಾಗಿ ಇಲ್ಲಿ ಬುಕ್ ಮಾಡಲು ಸಾಧ್ಯವೇ ಎಂದು ಕೇಳುತ್ತದೆ. ನಂತರ ಹೋಟೆಲ್ ಕಡೆಯಿಂದಲೂ AI ಡಿವೈಸ್ ಉತ್ತರ ನೀಡಲು ಆರಂಭಿಸುತ್ತದೆ.
ತಾವಿಬ್ಬರು AI ಎಂದು ತಿಳಿಯುತ್ತಲೇ ಮುಂದೆ ಈ ಎರಡು ಡಿವೈಸ್‌ಗಳ ನಡುವಿನ ಸಂಭಾಷಣೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ರೀತಿಯಾದ್ರೆ ಮುಂದೆ ಇದು ಇನ್ಯಾವ ಅನಾಹುತಕ್ಕೆ ಕಾರಣವಾಗುತ್ತೆ ಎಂಬ ಆತಂಕ ಜನಸಾಮಾನ್ಯರಲ್ಲಿ ಶುರುವಾಗಿದೆ.
ಎರಡು AI ಡಿವೈಸ್‌ಗಳ ನಡುವೆ ವಿಚಿತ್ರ ಭಾಷೆಯಲ್ಲಿ ಸಂಭಾಷಣೆ ಶುರುವಾಗುತ್ತದೆ. ಇದು ಸಾಮಾನ್ಯ ವ್ಯಕ್ತಿಗಳಿಗೆ ಖಂಡಿತವಾಗಿ ಅರ್ಥವಾಗದ ಭಾಷೆಯಾಗಿದೆ. ಈ ರೀತಿಯಲ್ಲಿ ಯಂತ್ರಗಳು ತಮ್ಮ ಸೃಷ್ಟಿಕರ್ತನಿಗೆ ಅರ್ಥವಾಗದ ಹಾಗೆ ಮಾತನಾಡಿದ್ರೆ ಇದು ಭವಿಷ್ಯದಲ್ಲಿ ಉಂಟಾಗುವ ಅಪಾಯವನ್ನು ಸೂಚಿಸುವ ಲಕ್ಷಣವಾಗಿದೆ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
https://www.instagram.com/reel/DGeBOWNySY-/?igsh=MTM3MzRqbGVyaWJqcQ==