newsics.com
ಶುಭ ದಿನ
ಇಂದಿನ ಪಂಚಾಂಗ
ಮಾಘ ಮಾಸ ಕೃಷ್ಣ ಪಕ್ಷ ತ್ರಯೋದಶಿ
26-02-2025, ಬುಧವಾರ
# ಮಹಾಶಿವರಾತ್ರಿ
# ವೀರ ಸಾವರ್ಕರ್ ಪುಣ್ಯಸ್ಮರಣೆ (ದಿನಾಂಕಾನುಸಾರ)
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 26/02/2025
ತಿಂಗಳು – ಫೆಬ್ರವರಿ
ಬಣ್ಣ – ಹಸಿರು
ವಾರ – ಬುಧವಾರ
ತಿಥಿ – ತ್ರಯೋದಶಿ 11:07:58
ಪಕ್ಷ – ಕೃಷ್ಣ
ನಕ್ಷತ್ರ – ಶ್ರಾವಣ 17:22:22
ಯೋಗ – ಪರಿಘ 26:56:26*
ಕರಣ – ವಾಣಿಜ 11:07:58
ಕರಣ – ವಿಷ್ಟಿ (ಭದ್ರ) 22:04:56
ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ) ಫಾಲ್ಗುಣ
ಚಂದ್ರ ರಾಶಿ – ಮಕರ till 28:36:04*
ಚಂದ್ರ ರಾಶಿ – ಕುಂಭ from 28:36:04*
ಸೂರ್ಯ ರಾಶಿ – ಕುಂಭ
ಋತು – ಶಿಶಿರ
ಸೂರ್ಯೋದಯ 06:38:12
ಸೂರ್ಯಾಸ್ತ 18:26:51
ಹಗಲಿನ ಅವಧಿ 11:48:39
ರಾತ್ರಿಯ ಅವಧಿ 12:10:48
ಚಂದ್ರಾಸ್ತ 16:58:39
ಚಂದ್ರೋದಯ 29:59:24*
ರಾಹು ಕಾಲ 12:33 – 14:01 ಅಶುಭ
ಯಮಘಂಡ ಕಾಲ 08:07 – 09:35 ಅಶುಭ
ಗುಳಿಕ ಕಾಲ 11:04 – 12:33
ಅಭಿಜಿತ್ 12:09 – 12:56 ಅಶುಭ
ದುರ್ಮುಹೂರ್ತ 12:09 – 12:56 ಅಶುಭ
—
ಇಂದಿನ ಮಾತು
ಅವರಿಷ್ಟರಂತೆ ನಾವಿಲ್ಲವೆಂದರೆ ನಾವು ಎಷ್ಟೇ ಒಳ್ಳೆಯವರಾದರೂ ಕೆಟ್ಟವರೇ!
—
ಇಂದಿನ ಸುಭಾಷಿತ
ಧರ್ಮಾಽಖ್ಯಾನೇ ಶ್ಮಶಾನೇ ಚ
ರೋಗಿಣಾಂ ಯಾ ಮತಿರ್ಭವೇತ್ ।
ಸಾ ಸರ್ವದೈವ ತಿಷ್ಠೇಚ್ಚೇತ್
ಕೋ ನ ಮುಚ್ಯೇತ ಬಂಧನಾತ್ ॥
(ಚಾಣಕ್ಯನೀತಿ)
ಧರ್ಮಪ್ರವಚನ ಕಾಲದಲ್ಲೂ, ಸ್ಮಶಾನದಲ್ಲೂ, ರೋಗ ಬಂದಾಗಲೂ ಇರುವ ವೈರಾಗ್ಯ ಬುದ್ಧಿಯು ಸತತವಾಗಿ ಇದ್ದರೆ ಸಂಸಾರ ಬಂಧನದಿಂದ ಪಾರಾಗುವುದೇನೂ ಕಷ್ಟವಲ್ಲ.
—
ಇಂದಿನ ಪದಾರ್ಥ
ಅತಿಕೃಪಣ = Very poor,
ಅತಿಕ್ಲೇಶ = Great distress
—
ಇಂದಿನ ಓದು
ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ |
ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || 4 ||
27) ಶಿವಃ
‘ಶ’ ಅಂದರೆ ಸುಖ; ಶಿವ ಎಂದರೆ ಜ್ಞಾನಾನಂದ ಹಾಗೂ ಪರಮ ಮಂಗಳ ಸ್ವರೂಪ.
28) ಸ್ಥಾಣುಃ
ಸ್ಥಾಣು ಎಂದರೆ ‘ಚಲಿಸದ’ ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ಸರ್ವಗತ ಅದ್ದರಿಂದ ಆತ ಸ್ಥಾಣು. ಆತ ಚಲಿಸದೆ ಮಲಗಿದ್ದರೂ, ಎಲ್ಲಾ ಕಡೆ ತಲುಪಬಲ್ಲ. ಏಕೆಂದರೆ ಬಿಂಬ ರೂಪವಾಗಿ ಪ್ರತಿಯೊಂದರಲ್ಲೂ ಭಗವಂತ ಇದ್ದಾನೆ. ಆತ ಆಕಾಶಕ್ಕಿಂತ ದೊಡ್ಡವ, ಪರಮಾಣುಗಿಂತ ಚಿಕ್ಕವ! It moves and it moves not! ಚಲಿಸಿದಂತೆ ಕಾಣುವ ಚಲಿಸದೇ ಇರುವ ಭಗವಂತ ಸ್ಥಾಣು.