newsics.com
ಮಹಾ ಶಿವರಾತ್ರಿ ಉತ್ಸವವನ್ನು ಈ ವರ್ಷ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬಹಳ ವೈಭವ ಹಾಗೂ ಉತ್ಸಾಹಗಳಿಂದ ಆಚರಿಸಲಾಗುತ್ತಿದೆ. ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಸಾನ್ನಿಧ್ಯದಲ್ಲಿ ಮಹಾ ಶಿವರಾತ್ರಿ ಉತ್ಸವ ನಡೆಯುತ್ತಿದೆ.
ಸುಮಾರು 1000 ವರ್ಷಗಳ ನಂತರ ಪುರಾತನ ಸೋಮನಾಥ ಜ್ಯೋತಿರ್ಲಿಂಗವನ್ನು ಸಾವಿರಾರು ಭಕ್ತರ ಮುಂದೆ ಬಹಿರಂಗ ಮಾಡಲಾಗಿದೆ. 1000 ವರ್ಷಗಳ ಹಿಂದೆ ಭಗ್ನವಾಗಿ ಕಣ್ಮರೆಯಾಗಿದ್ದ ಸೋಮನಾಥ ಜ್ಯೋತಿರ್ಲಿಂಗದ ಪುನರ್ ಉದಯವಾಗಿದೆ.
2025ರ ಜನವರಿಯಲ್ಲಿ, ಪವಿತ್ರ ಜ್ಯೋತಿರ್ಲಿಂಗವನ್ನು ಆರ್ಟ್ ಆಫ್ ಲಿವಿಂಗ್ ಇಂಟರ್‌ನ್ಯಾಷನಲ್ ಕೇಂದ್ರಕ್ಕೆ ತರಲಾಯಿತು. ಸಾವಿರಾರು ಭಕ್ತರ ಎದುರು ಗುರುದೇವರು ಅದನ್ನು ಅನಾವರಣ ಮಾಡಿದ್ದಾರೆ ಶ್ರೀ ಶ್ರೀ ರವಿಶಂಕರ ಗುರೂಜಿ. ಗುರುದೇವರು ಲಿಂಗವನ್ನು ಕೈಯಲ್ಲಿ ಹಿಡಿದು ಅದರ ಅದ್ಭುತ ಅಯಸ್ಕಾಂತ ಶಕ್ತಿಯನ್ನು ಎಲ್ಲರಿಗೂ ಪ್ರದರ್ಶನ ಮಾಡಿ ತೋರಿಸಿದ್ದಾರೆ.