newsics.com
ಬೆಂಗಳೂರು : ಹಿರಿಯ ರಂಗ ಕಲಾವಿದೆ, ಸಂಘಟಕಿ, ಲಲಿತಕಲೆಗಳ ಪೋಷಕರಾಗಿದ್ದ ವಿಮಲಾ ರಂಗಾಚಾರ್ (97) ಇಂದು ವಿಧಿವಶರಾದರು.
ಬೆಂಗಳೂರಿನ ಎಂಇಎಸ್ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿದ್ದರು. ಬೆಂಗಳೂರಿನ ಸೇವಾ ಸದನ ಕಟ್ಟಿ ಬೆಳೆಸಿದ ಅವರು, ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಕಟ್ಟಿದ ಭಾರತೀಯ ನಾಟ್ಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.
ಮಗಳು ರೇವತಿ ವಿದೇಶದಲ್ಲಿದ್ದು, ಅವರು ಬಂದ ಬಳಿಕ ವಿಮಲಾ ಅವರ ಅಂತ್ಯಕ್ರಿಯೆ ಇದೇ 27ರಂದು ನಡೆಯಲಿದೆ.