newsics.com
ಹಿಂದೂ ಧರ್ಮದಲ್ಲಿ ಆಚರಿಸುವ ಪ್ರಮುಖವಾದ ಹಬ್ಬಗಳಲ್ಲಿ ಶಿವರಾತ್ರಿ ಅಥವಾ ಮಹಾ ಶಿವರಾತ್ರಿ ಹಬ್ಬ ಕೂಡ ಒಂದು. ವಿಶೇಷವಾಗಿ ತಮಿಳುನಾಡಿನಲ್ಲಿ ಈ ಹಬ್ಬವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸುತ್ತಾರೆ ಎಂದು ಹೇಳಲಾಗುತ್ತದೆ.
ಪುರಾಣದಲ್ಲಿ ಹೇಳಿರುವ ಪ್ರಕಾರ ಈ ರಾತ್ರಿ ಭನವಾನ್ ಶಿವ ಪಾರ್ವತಿಯನ್ನು ಮದುವೆಯಾದ ಎಂದು ತಿಳಿದುಬಂದಿದೆ. ಈ ವಿವಾಹ ಮಹೋತ್ಸವವನ್ನೇ ಮಹಾಶಿವರಾತ್ರಿಯ ರೂಪದಲ್ಲಿ ಆಚರಿಸಲಾಗುತ್ತದೆ.
ಇನ್ನೊಂದು ಪುರಾಣ ಕಥೆಯ ಆಧಾರದ ಮೇಲೆ ನೋಡುವುದಾದರೆ, ಭಗವಾನ್ ಶಿವನು ಈ ರಾತ್ರಿಯಲ್ಲಿ ತನ್ನ ನೃತ್ಯ ರುದ್ರತಾಂಡವದ ಮೂಲಕ ಜಗತ್ತಿನಲ್ಲಿರುವ ಎಲ್ಲಾ ಕೆಟ್ಟ ಶಕ್ತಿಗಳನ್ನು ನಾಶ ಪಡಿಸುತ್ತಾನೆ ಎಂದು ನಂಬಲಾಗಿದೆ.
ಉಪವಾಸದಿಂದ ಪ್ರಯೋಜನಕಾರಿ :
- ನಮ್ಮ ದೇಹವು ಶೇ.70ರಷ್ಟು ನೀರಿನಿಂದ ಕೂಡಿದೆ. ಚಂದ್ರನು ಸಮುದ್ರದ ಉಬ್ಬರವಿಳಿತದ ಮೇಲೆ ಪರಿಣಾಮ ಬೀರುವಂತೆಯೇ, ಅದು ನಮ್ಮ ದೇಹದ ಜೀರ್ಣಕ್ರಿಯೆ ಮತ್ತು ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಉಪವಾಸ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.
- ಉಪವಾಸ ಮಾಡುವುದರಿಂದ ಹಿಡಿದು, ಧ್ಯಾನ ಮತ್ತು ಮಂತ್ರ ಸ್ತೋತ್ರಗಳನ್ನು ಪಠಿಸುವುದರಿಂದ ನಮ್ಮ ಒಳಗಿನ ಆತಂಕ ಮತ್ತು ಚಡಪಡಿಕೆಯಂತಹ ಮಾನಸಿಕ ಅಸ್ವಸ್ಥತೆಗಳು ಕಡಿಮೆ ಆಗುತ್ತವೆ. ಮನಸ್ಸು ಮತ್ತು ದೇಹ ಯಾವಾಗಲೂ ಸ್ಥಿರವಾಗಿರುತ್ತದೆ.
- ಆಗಾಗ ಉಪವಾಸ ಮಾಡುವುರಿಂದ ನಮ್ಮ ದೇಹದೊಳಗಿನ ತ್ಯಾಜ್ಯ ಉತ್ಪನ್ನಗಳು ತಾವಾಗಿಯೇ ಹೊರಗೆ ಬರುತ್ತವೆ. ಜೀರ್ಣವಾಗದ ಆಹಾರವನ್ನು ಕೂಡ ಹೊರಹಾಕಲು ಉಪವಾಸ ಸಹಾಯ ಮಾಡುತ್ತದೆ ಅನ್ನೋದನ್ನು ವೈಜ್ಞಾನಿಕ ತತ್ವದಲ್ಲಿ ವಿವರಿಸಲಾಗಿದೆ.
- ಕೆಲವು ಗಂಟೆಗಳ ಕಾಲ ಊಟ ತ್ಯಜಿಸುವುದರಿಂದ ಜೀರ್ಣಾಂಗಗಳಿಗೆ ವಿಶ್ರಾಂತಿ ನೀಡಿದಂತಾಗುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತೇಜಿಸಲ್ಪಡುತ್ತದೆ. ಉಪವಾಸದಿಂದ ನಮ್ಮ ಜೀರ್ಣಕ್ರಿಯೆ, ಮೆದುಳಿನ ಕಾರ್ಯ, ಏಕಾಗ್ರತೆ ಮತ್ತು ಇಚ್ಛಾಶಕ್ತಿ ಕೂಡ ಹೆಚ್ಚಾಗುತ್ತದೆ.
- ಉಪವಾಸವು ನಮ್ಮ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟಗಳು ಸಾಮಾನ್ಯವಾಗುತ್ತವೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಉಪವಾಸವು ಹೆಚ್ಚು ಪ್ರಯೋಜನಕಾರಿ.
- ಉಪವಾಸವು ಆಧ್ಯಾತ್ಮಿಕ ಪ್ರಗತಿಗೆ ಪ್ರಮುಖ ಕಾರಣ ಕೂಡ ಹೌದು. ಆಂತರಿಕ ಶಾಂತಿ ಮತ್ತು ಜ್ಞಾನೋದಯವನ್ನು ನೀಡುತ್ತದೆ. ಮಹಾಶಿವರಾತ್ರಿಯಂದು, ಮಂತ್ರ ಪಠಣ, ಧ್ಯಾನ ಮತ್ತು ಜಾಗರಣೆಯ ಹೆಸರಿನಲ್ಲಿ ರಾತ್ರಿಯಲ್ಲಿ ಎಚ್ಚರವಾಗಿರುವುದರಿಂದ ಆಧ್ಯಾತ್ಮಿಕ ಅರಿವು ಕೂಡ ಹೆಚ್ಚಾಗುತ್ತದೆ.
- ಈ ಪವಿತ್ರ ದಿನದಂದು ಎಲ್ಲಾ ಭಕ್ತರು ಭಗವಾನ್ ಶಿವನನ್ನು ತುಂಬಾನೇ ಶ್ರದ್ಧೆ ಭಕ್ತಿಯಿಂದ ಪೂಜಿಸುತ್ತಾರೆ. ಈ ದಿನ ಶಿವನನ್ನು ಆರಾಧಿಸುವುದರಿಂದ ಜೀವನದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಅದರಲ್ಲೂ ಈ ವಿಶೇಷ ದಿನದಲ್ಲಿ ಭಕ್ತಿಯಿಂದ ಮಾಡುವ ಉಪವಾಸದಿಂದ, ನಾವು ವರ್ಷ ಪೂರ್ತಿ ಮಾಡುವ ಕಠಿಣ ಪ್ರಾರ್ಥನೆಗೆ ಸಮವಾಗಿರುತ್ತದೆ ಎಂದು ಭಕ್ತರು ನಂಬುತ್ತಾರೆ.
- ಅಷ್ಟೇ ಅಲ್ಲ ಮಹಾ ಶಿವರಾತ್ರಿಯಂದು ಭಕ್ತಿಯಿಂದ ಉಪವಾಸವನ್ನು ಆಚರಿಸಿದರೆ, ಆ ಭಕ್ತನನ್ನು ಶಿವ ತನ್ನ ಮಕ್ಕಳಾದ ಗಣಪ ಹಾಗೂ ಕಾರ್ತಿಕನಷ್ಟೇ ಪ್ರೀತಿ ತೋರಿಸುತ್ತಾನೆ ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ ಯಂತೆ