newsics.com
ಬೆಂಗಳೂರು: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಮಹಿಳೆಯರೊಬ್ಬರನ್ನು ವ್ಯಕ್ತಿ ಹಳೇ ಪರಿಚಯ ನೆಪದಲ್ಲಿ ಭೇಟಿ ಮಾಡಿ ನಂತರ ಕರೆದೊಯ್ದು ಮೂವರ ಜೊತೆ ಸೇರಿಕೊಂಡು ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.
ಪರಿಚಯ ಇದ್ದಂತೆ ಮಾತನಾಡಿ ನಂತರ ಹೋಟೆಲ್ ಗೆ ಊಟಕ್ಕಂತ ಕರೆದುಕೊಂಡು ಹೋಗಿ ಹೋಟೆಲ್ ನ ಟೆರೇಸ್ ಮೇಲೆ ಅತ್ಯಾಚಾರ ಎಸಗಲಾಗಿದೆ. ನಂತರ ಮೊಬೈಲ್, ಪರ್ಸ್ ಕಿತ್ತುಕೊಂಡು ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗಿದೆ.ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಘಟನೆ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.