newsics.com
ನವದೆಹಲಿ: ದೆಹಲಿ ಬಿಜೆಪಿ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಗೆ ಬಿಜೆಪಿ ನೂತನ ಮುಖ್ಯಮಂತ್ರಿಯನ್ನು ಘೋಷಣೆ ಮಾಡಿದೆ. ರೇಖಾ ಗುಪ್ತಾ ಎಂಬ ಮಹಿಳಾ ಸಿಎಂ ಅನ್ನು ಘೋಷಿಸಿರುವ ಬಿಜೆಪಿ ಬರೋಬ್ಬರಿ 27 ವರ್ಷಗಳ ಬಳಿಕ ದೆಹಲಿಯನ್ನು ಆಡಳಿತ ನಡೆಸಲು ತಯಾರಾಗಿದೆ.
ಇನ್ನು ರೇಖಾ ಗುಪ್ತಾ ನೂತನ ಸಿಎಂ ಎಂದು ಆಯ್ಕೆಯಾದ ಬೆನ್ನಲ್ಲೇ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ದೆಹಲಿ ನೂತನ ಸಿಎಂ ರೇಖಾ ಗುಪ್ತಾ ಅವರ ಹಳೆಯ ವಿಡಿಯೊವೊಂದು ಇದೇ ಸಮಯಕ್ಕೆ ವೈರಲ್ ಆಗಿದ್ದು, ಈ ವಿಡಿಯೊದಲ್ಲಿ ರೇಖಾ ಗುಪ್ತಾ ಈ ಹಿಂದೆ ನಡೆದಿದ್ದ ಮೇಯರ್ ಚುನಾವಣೆಯಲ್ಲಿ ಸೋತ ಬಳಿಕ ಅಲ್ಲಿದ್ದ ಪೋಡಿಯಂ ಹಾಗೂ ಮೈಕ್ ಅನ್ನು ಕೋಪದಲ್ಲಿ ಕಿತ್ತು ಬಿಸಾಡಿದ್ದರು. ಈ ವಿಡಿಯೊ ಈಗ ವೈರಲ್ ಆಗುತ್ತಿದ್ದು, ರೇಖಾ ಗುಪ್ತ ವಿರುದ್ಧ ಟೀಕೆಗಳೂ ಸಹ ಆರಂಭವಾಗಿವೆ.
ಫೆಬ್ರವರಿ 5 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಿ ಬಿಜೆಪಿ 27 ವರ್ಷಗಳ ನಂತರ ಅಧಿಕಾರಕ್ಕೆ ಬಂದಿದೆ.
ರೇಖಾ ಗುಪ್ತಾ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡುತ್ತಿದ್ದಂತೆ ಅವರ ನಿವಾಸದ ಬಳಿ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ.