newsics.com
ಬಿಗ್ ಬಾಸ್ ಕನ್ನಡ ಸೀಸನ್ 11 ಟ್ರೋಫಿ ಗೆದ್ದ ಬಳಿಕ ಹನುಮಂತನ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ, ಹನುಮಂತನ ಹವಾ ಕರುನಾಡಲ್ಲಿ ಭರ್ಜರಿ ಆಗೇ ಇದೆ. ಸಿನಿಮಾ ಆಫರ್ ಗಳು ಕೂಡ ಬರುತ್ತಿವೆಯಂತೆ. ಇವರು ರಾಜಕೀಯಕ್ಕೂ ಬರುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇವೆಲ್ಲದರ ಮಧ್ಯೆ ಬಾಯ್ಸ್ vs ಗರ್ಲ್ಸ್ ಶೋನಲ್ಲಿ ಭಾಗವಹಿಸಿದ್ದ ಹನುಮಂತ ಈಗ ಕಳೆದ ಎರಡು ವಾರಗಳ ಕಾರ್ಯಕ್ರಮದಿಂದ ಮಿಸ್ ಆಗಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮ ಮುಗಿದ ಬಳಿಕ ಹೊಸದಾಗಿ ವೀಕೆಂಡ್ ನಲ್ಲಿ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಶುರುವಾಗಿರುವುದು ಗೊತ್ತೇ ಇದೆ. ಈಗಾಗಲೇ ಮೂರು ವಾರ ಈ ಪ್ರೊಗ್ರಾಂ ಟೆಲಿಕಾಸ್ಟ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ.
ಈ ಶೋನ ಓಪನಿಂಗ್ ಎಪಿಸೋಡ್ನಲ್ಲಿ ದೋಸ್ತಾ ಧನರಾಜ್ ಆಚಾರ್ ಜೊತೆ ಮಜಾ ಮಾಡ್ಕೊಂಡು, ಹುಡುಗಿಯರ ಕಾಲು ಎಳೆಯುತ್ತಿದ್ದ ಹನುಮಂತು ಎರಡನೇ ವಾರದಿಂದಲೇ ಕಾಣಿಸುತ್ತಿಲ್ಲ. ಬಿಗ್ ಬಾಸ್ ವಿನ್ನರ್ ಅಲ್ವಾ.. ಅಲ್ಲಿ-ಇಲ್ಲಿ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಹೋಗಿರಬಹುದು.. ಬ್ಯುಸಿ ಇರಬೇಕು ಅಂದುಕೊಂಡರೆ ಮೂರನೇ ವಾರ ಕೂಡ ಇವರು ಬಂದಿಲ್ಲ. ಹೀಗಾಗಿ ಇವರು ಬಾಯ್ಸ್ vs ಗರ್ಲ್ಸ್ ಶೋನಿಂದ ಹೊರನಡೆದಿದ್ದಾರ ಎಂದು ವೀಕ್ಷಕರಿಗೆ ಅನುಮಾನಗಳು ಹುಟ್ಟಿಕೊಂಡಿದೆ.