newsics.com
ಬಾಲಿವುಡ್ ನಟಿ ರಾಧಿಕಾ ಆಪ್ಟೆ ವಾಶ್ ರೂಂನಲ್ಲಿರುವ ಫೋಟೋ ಹಂಚಿಕೊಂಡು ವಿವಾದಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗೆ ಲಂಡನ್ನಲ್ಲಿ ನಡೆದ 78ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಾಧಿಕಾ ಆಪ್ಟೆ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿನ ವಾಶ್ ರೂಂನಿಂದ ಫೋಟೋವೊಂದನ್ನು ಹಂಚಿಕೊಂಡಿರುವ ನಟಿ ತಮ್ಮ ಹೇಳಿಕೆಯಿಂದ ಟೀಕೆಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಪೋಟೊದಲ್ಲಿ ನಟಿ ರಾಧಿಕಾ ಆಪ್ಟೆ ಒಂದು ಕೈಯಲ್ಲಿ ಶ್ಯಾಂಪೇನ್ ಗ್ಲಾಸ್ ಹಿಡಿದಿದ್ದರೆ, ಮತ್ತೊಂದು ಕೈಯಲ್ಲಿ ತಮ್ಮ ಸ್ತನದಿಂದ ಎದೆಹಾಲು ಪಂಪ್ ಮಾಡುತ್ತಿದ್ದಾರೆ. ಈ ಫೋಟೊ ಹಂಚಿಕೊಂಡು ಇದಕ್ಕೆ ವಿವರಣೆಯನ್ನೂ ನೀಡಿದ್ದಾರೆ ರಾಧಿಕಾ. ಇದು ನನ್ನ BAFTAsನ ರಿಯಾಲಿಟಿ ಎಂದು ನಗುವ ಎಮೋಜಿ ಹಾಕಿದ್ದಾರೆ.
ತಾಯಿ ಆಗಿರುವ ಕಾರಣ ಅವರು ಕೆಲಸದ ಒತ್ತಡದ ನಡುವೆ ಎದೆಹಾಲು ಕುಡಿಸಬೇಕು ಎನ್ನುವ ಉದ್ದೇಶದಿಂದ ವಾಶ್ರೂಂಗೆ ತೆರಳಿ, ಬಾಟಲ್ನಲ್ಲಿ ಎದೆಹಾಲು ಸಂಗ್ರಹಿಸಲು ಮುಂದಾಗಿದ್ದಾರೆ. ಆದರೆ ಅವರು ಆಲ್ಕೋಹಾಲ್ ಇರುವ ಶಾಂಪೇನ್ ಸವಿಯುತ್ತಾ ಎದೆಹಾಲು ಸಂಗ್ರಹಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಫೋಟೊವನ್ನು ರಾಧಿಕಾ ಆಪ್ಟೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
Health Tips ಆರೋಗ್ಯವಾಗಿರಲು, ಸೌಂದರ್ಯ ವೃದ್ಧಿಗೆ ಇವುಗಳನ್ನು ತಪ್ಪದೇ ತಿನ್ನಿ…