newsics.com
ಬೆಂಗಳೂರು: ಸೊಸೆಯೊಬ್ಬಳು ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅತ್ತೆಯನ್ನು ಸಾಯಿಸಬೇಕು ಎಂದು ಬೆಂಗಳೂರಿನ ಡಾಕ್ಟರ್ ಸುನೀಲ್ ಕುಮಾರ್ ಎಂಬುವವರ ಬಳಿ ಸಹಾಯ ಕೇಳಿದ್ದಾಳೆ. ಮಹಿಳೆಯ ಸಂದೇಶ ಕಂಡು ವೈದ್ಯರು ಅಚ್ಚರಿಗೊಂಡಿದ್ದಾರೆ.
ಮೊಬೈಲ್ ಡಾಕ್ಟರ್ ಎಂದೇ ಖ್ಯಾತಿ ಪಡೆದಿರೋ ಡಾ.ಸುನೀಲ್ ಕುಮಾರ್ ಹೆಬ್ಬಿಗೆ ಮಹಿಳೆಯೊಬ್ಬರು ವಾಟ್ಸಪ್ ನಲ್ಲಿ ಸಂಪರ್ಕಿಸಿ ನಮ್ಮ ಅತ್ತೆ ತುಂಬಾ ಹಿಂಸೆ ಕೊಡ್ತಿದ್ದಾರೆ. ಅವ್ರಿಗೆ ವಯಸ್ಸಾಗಿದೆ. ಅವ್ರನ ಹೇಗೆ ಸಾಯಿಸೋದು. ಒಂದೆರೆಡು ಮಾತ್ರೆ ಇರುತ್ತಲ್ಲ ಅದನ್ನ ಹೇಳಿ ಅಂತ ಮೆಸೇಜ್ ಮೂಲಕ ಕೇಳಿದ್ದಾರೆ. ಆದರೆ ವೈದ್ಯರುಸಾಯಿಸಲು ಯತ್ನಿಸೋದು, ಈ ತರ ಮಾತ್ರೆ ಕೆಳೋದು ತಪ್ಪು ಅಂತ ರೀಪ್ಲೈ ಮಾಡಿದ್ದಾರೆ. ಮೆಸೇಜ್ ಮಾಡಿದ್ದ ಮಹಿಳೆ ವಾಟ್ಸಾಪ್ ಚಾಟ್ ಡಿಲೀಟ್ ಮಾಡಿ ಡಾಕ್ಟರ್ ನಂಬರ್ ನ ಬ್ಲಾಕ್ ಮಾಡಿದ್ದಾರಂತೆ. ಆದರೆ ಚಾಟ್ ಡಿಲೀಟ್ ಆಗುವ ಮುನ್ನ ಡಾಕ್ಟರ್ ಸುನೀಲ್ ಕುಮಾರ್ ಸ್ಕ್ರೀನ್ ಶಾರ್ಟ್ ನ ತೆಗೆದುಕೊಂಡು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸದ್ಯ ಮಾತ್ರೆ ಕೇಳಿದ್ದ ಚಾಲಾಕಿ ಸೊಸೆಯ ಫೋನ್ ಸ್ವಿಚ್ ಆಫ್ ಆಗಿದ್ದು, ಮಹಿಳೆಯ ಪತ್ತೆಯ ಬಳಿಕವಷ್ಟೇ ಅಸಲಿ ಸತ್ಯಾಂಶ ತಿಳಿದು ಬರಬೇಕಿದೆ.