newsics.com
ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಉರುಡುಗ ಸದ್ಯ ನಿನಗಾಗಿ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಈ ಮಧ್ಯೆ ಕೆಪಿ ಅರವಿಂದ್, ದಿವ್ಯಾ ಉರುಡುಗ ಅವರು ಯಾವಾಗ ಮದುವೆ ಆಗ್ತಾರೆ ಎನ್ನುವ ಪ್ರಶ್ನೆ ಆಗಾಗ ಕೇಳಿ ಬರುತ್ತಿರುತ್ತದೆ. ಡಾಲಿ ಧನಂಜಯ, ಧನ್ಯತಾ ಅವರ ಮದುವೆಯಲ್ಲಿ ಭಾಗಿಯಾದ ಈ ಜೋಡಿ ಮದುವೆ ಯಾವಾಗ ಎಂದು ಹೇಳಿಕೊಂಡಿದ್ದಾರೆ.
ನಿಮಗೆ ಹೇಳದೆ ಮದುವೆ ಆಗೋದಿಲ್ಲ. ಅತಿ ಶೀಘ್ರದಲ್ಲಿ ಮದುವೆ. ಎಂದು ಹೇಳಿದ್ದಾರೆ.sಸಬಿಗ್ಬಾಸ್ ಸೀಸನ್ 8ರಲ್ಲಿ ಅರವಿಂದ್ ಕೆ ಪಿ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಸಿದ್ದರು. ಬಿಗ್ಬಾಸ್ ಮನೆಯಲ್ಲಿದ್ದಾಗ ಈ ಇಬ್ಬರ ಮಧ್ಯೆ ಸ್ನೇಹ ಬೆಳೆಯಿತು. ಆ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಲು ಸಜ್ಜಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಾಗಲಿ, ಯಾವುದೇ ಕಾರ್ಯಕ್ರಮದಲ್ಲಾಗಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅರವಿಂದ್ ಕೆಪಿ ಬೈಕ್ ರ್ಯಾಲಿಗಳಲ್ಲೂ ದಿವ್ಯಾ ಹಾಜರಿರುತ್ತಾರೆ. ಇಬ್ಬರು ಜೊತೆಯಾಗಿ ಅರ್ಧಂಬರ್ಧ ಪ್ರೇಮ ಕಥೆ ಎನ್ನುವ ಸಿನಿಮಾ ಕೂಡ ಮಾಡಿದ್ದರು. ಈ ಜೋಡಿಯನ್ನು ಹೆಚ್ಚಾಗಿ ಜನ ಕೇಳುವ ಪ್ರಶ್ನೆಯೇ ಮದುವೆ ಯಾವಾಗ ಅನ್ನೋದು. ಆದರೆ ಇಬ್ಬರೂ ಕೂಡ ಇಲ್ಲಿವರೆಗೂ ಅದಕ್ಕೆ ಉತ್ತರ ನೀಡಿಲ್ಲ.
ಕಳೆದ ಮೂರು ವರ್ಷಗಳಲ್ಲಿ ಯಾರದ್ದೇ ಮದುವೆ ಇರಲೀ, ಪ್ರೀಮಿಯರ್ ಶೋ ಇರಲೀ, ಅದರಲ್ಲಿ ದಿವ್ಯಾ ಉರುಡುಗ, ಕೆಪಿ ಅರವಿಂದ್ ಅವರು ಭಾಗಿಯಾಗಿದ್ದರು. ಈ ಮೂಲಕ ಅವರು ತಾವು ಲವ್‌ನಲ್ಲಿರೋದು ಪಕ್ಕಾ, ಮದುವೆ ಆಗ್ತಿರೋದು ಪಕ್ಕಾ ಎಂದು ಹೇಳಿಕೊಂಡಿದ್ದರು.