newsics.com
ಬೆಂಗಳೂರು :ಬೀದಿನಾಯಿಗಳ ವಿಚಾರದಲ್ಲಿ ಸದಾ ಒಂದಿಲ್ಲೊಂದು ಹೊಸ ಹೊಸ ಪ್ರಯೋಗ ಮಾಡೋಕೆ ಹೊರಟಿರೋ ಪಾಲಿಕೆ (BBMP) ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಬೀದಿನಾಯಿಗಳಿಗೆ ಊಟ ನೀಡುವ ಕೆಲಸ ಶುರುಮಾಡಿರುವ ಪಾಲಿಕೆ ಇದೀಗ ಬೀದಿನಾಯಿಗಳಿಗೆ ರೋಗ ಹರಡದಂತೆ ನಿಗಾ ಇಡುವುದಕ್ಕೆ ಹೊರಟಿದೆ. ಸದ್ಯ ಬಿಬಿಎಂಪಿಯ ಈ ಹೊಸ ಯೋಜನೆಗೆ ಇಂದು ಚಾಲನೆ ನೀಡಿರುವ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಈ ಪ್ಲಾನ್ ನಿಂದ ನಾಯಿಗಳಿಗೆ ಹರಡುವ ರೋಗ ಹಾಗೂ ನಾಯಿಗಳಿಂದ ಮನುಷ್ಯರಿಗೆ ಹರಡುವ ರೋಗಗಳಿಗೆ ಈ ಲಸಿಕೆ ಬ್ರೇಕ್ ಹಾಕಲಿದೆ ಅಂದಿದ್ದಾರೆ.
ಬೆಂಗಳೂರಿನ ಬೀದಿನಾಯಿಗಳಿಂದ ಹರಡುವ ರೋಗಗಳಿಗೆ ಕಡಿವಾಣ ಹಾಕಲು ಹೊರಟಿರೋ ಪಾಲಿಕೆ ಇದೀಗ ಹೊಸ ಪ್ಲಾನ್ ಜಾರಿ ಮಾಡೋಕೆ ಹೊರಟಿದೆ. ಪಾಲಿಕೆ ವ್ಯಾಪ್ತಿಯ 1.84 ಲಕ್ಷ ಬೀದಿನಾಯಿಗಳಿಗೆ ಕಂಬೈನ್ಡ್ ವ್ಯಾಕ್ಸಿನ್ ನೀಡೋಕೆ ಹೊರಟಿರೋ ಪಾಲಿಕೆ, ಇದಕ್ಕಾಗಿ ಬರೋಬ್ಬರಿ 4.98 ಕೋಟಿ ರೂಪಾಯಿ ಖರ್ಚು ಮಾಡೋಕೆ ಮುಂದಾಗಿದೆ.