newsics.com
ಬೆಂಗಳೂರು: ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ರಜತ್ ಹಲವು ಸಂದರ್ಶನಗಳನ್ನು ಕೂಡ ನಿಭಾಯಿಸಿ, ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೀಗ ಸುದೀಪ್ ಅವರ ಮಗಳು ಸಾನ್ವಿ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸಿಸಿಎಲ್ ಪಂದ್ಯಗಳು ನಡೆದಿವೆ. ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ ನಡುವಿನ ಪಂದ್ಯದಲ್ಲಿ ನಮ್ಮ ಸ್ಯಾಂಡಲ್ ಸ್ಟಾರ್ಸ್ ಗೆದ್ದಿರೋದು ಗೊತ್ತೇ ಇದೆ. ಈ ಪಂದ್ಯವನ್ನು ನೋಡುವುದಕ್ಕೆ ಸಾನ್ವಿ ಸುದೀಪ್ ಹಾಗೂ ಪ್ರಿಯಾ ಸುದೀಪ್ ಕೂಡ ಬಂದಿದ್ದರು.
ಅಂದೇ ರಜತ್ ಕೂಡ ಬಂದಿದ್ದರು. ಇದೇ ವೇಳೆ ದೀಪಿಕಾ ದಾಸ್, ಅದ್ವಿತಿ, ಅಶ್ವಿತಿ, ದಿವ್ಯ ಉರುಡುಗ, ಹೀಗೆ ಲೇಡಿ ಟೀಂ, ಸಾನ್ವಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಎಲ್ಲರೂ ಖುಷಿ ಖುಷಿಯಾಗಿಯೇ ಫೋಟೋ ತೆಗೆಸಿಕೊಳ್ಳುತ್ತಿರುವಾಗ ನಡುವಲ್ಲಿ ಬಂದ ರಜತ್ ಇವರ ಜೊತೆ ಹಿಂದೆ ನಿಂತು ಪೋಸ್ ಕೊಟ್ಟಿದ್ದಾರೆ.