newsics.com
ಪ್ರಧಾನಿ ಮೋದಿ ಸಂದರ್ಶನಕ್ಕೂ ಮುನ್ನ 3 ದಿನ ಉಪವಾಸ ಮಾಡುವುದಾಗಿ ಅಮೆರಿಕ ಪಾಡ್ಕಾಸ್ಟರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಪಾಡ್ಕಾಸ್ಟರ್ ಲೆಕ್ಸ್ ಫ್ರಿಡ್ಮನ್, ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶಿಸಲಿದ್ದು, ಇದಕ್ಕಾಗಿ 3 ದಿನ ಉಪವಾಸ ಮಾಡುವುದಾಗಿ ತಿಳಿಸಿದ್ದಾರೆ. ಮೋದಿಯವರ ಬಹುದಿನಗಳ ಉಪವಾಸ ವ್ರತದಿಂದ ಪ್ರೇರಿತರಾಗಿ 48 ರಿಂದ 72 ಗಂಟೆಗಳ ಉಪವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶಿಸಲಿರುವ ಅಮೆರಿಕ ಪಾಡ್ಕಾಸ್ಟರ್ ಲೆಕ್ಸ್ ಫ್ರಿಡ್ಮನ್, ಮೋದಿಯವರನ್ನು ‘ಅತ್ಯಂತ ಆಕರ್ಷಕ ಮನುಷ್ಯ’ ಎಂದು ಬಣ್ಣಿಸಿದ್ದು, 3 ದಿನ ಉಪವಾಸ ಮಾಡಿ ಅವರನ್ನು ಸಂದರ್ಶಿಸುವುದಾಗಿ ತಿಳಿಸಿದ್ದಾರೆ.
ತಮ್ಮ ದೀರ್ಘಾವಧಿ ಸಂದರ್ಶನಗಳಿಂದಲೇ ಖ್ಯಾತರಾಗಿರುವ ಫ್ರಿಡ್ಮನ್, ಪ್ರಧಾನಿ ಮೋದಿಯವರೊಂದಿಗೆ ಹಲವು ಗಂಟೆಗಳ ಕಾಲ ಮಾತನಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕಾಗಿ ವಿಶೇಷ ವ್ರತ ಮಾಡುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಲೆಕ್ಸ್ ಅವರ ಯೂಟ್ಯೂಬ್ ಚಾನೆಲ್ 45.5 ಲಕ್ಷ ಚಂದಾದಾರರನ್ನು ಹೊಂದಿದೆ.
ಸದ್ಯ ಅಮೆರಿಕ ಪಾಡ್ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಮಾಡಿರುವ ಟ್ವೀಟ್ ವೈರಲ್ ಆಗಿದ್ದು, ಪ್ರಧಾನಿ ಮೋದಿಯವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PM Modi ಇಂದು ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ : 3 ಕೋಟಿ ವಿದ್ಯಾರ್ಥಿಗಳು ಭಾಗಿ
Bhanupriya ನೆನಪಿನ ಶಕ್ತಿ ಕಳೆದುಕೊಂಡ ಬಹುಭಾಷಾ ನಟಿ ಭಾನುಪ್ರಿಯಾ: ಈಗ ಹೇಗಿದ್ದಾರೆ?
Heart attack ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುವಾಗಲೇ ಕುಸಿದು ಕೊನೆಯುಸಿರೆಳೆದ ಯುವತಿ, ವೈರಲ್ ವಿಡಿಯೋ ನೋಡಿ