newsics.com
ಗುವಾಹತಿ: ಮಣಿಪುರ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅವರು ರಾಜೀನಾಮೆ ನೀಡಿದ್ದಾರೆ.
ತಮ್ಮ ನಾಯಕತ್ವದ ವಿರುದ್ಧ ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವನ್ನು ಶಮನಗೊಳಿಸಲು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಭಾನುವಾರ ಸಂಜೆ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಆಲಿ ಕಾನ್ರಾಡ್ ಸಾಂಗ್ಮಾ ಅವರ ರಾಷ್ಟ್ರೀಯ ಜನರ ಪಕ್ಷದ ಬೆಂಬಲವನ್ನು ಹಿಂತೆಗೆದುಕೊಂಡಿದ್ದರೂ ಬಿಜೆಪಿಗೆ ಬಹುಮತ ಹೊಂದಿದೆ. ಆದರೆ ರಾಜ್ಯದಲ್ಲಿ ನಾಯಕತ್ವದಲ್ಲಿ ಬದಲಾವಣೆಯನ್ನು ಕೋರಿದ ಶಾಸಕರು, ಅವಿಶ್ವಾಸ ಮಂಡನೆಗೆ ಪಟ್ಟು ಹಿಡಿದಿದ್ದರಿಂದ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಕೆಲ ಸಮಯದಲ್ಲೇ ಬೀರೇನ್ ಸಿಂಗ್ ರಾಜೀನಾಮೆ ಘೋಷಿಸಿದ್ದಾರೆ.
Bus fire, passengers escape ಚಲಿಸುತ್ತಿದ್ದ ಬಸ್‌ಗೆ ಬೆಂಕಿ, ಪ್ರಯಾಣಿಕರು ಪಾರು: 30 ಲಕ್ಷ ರೂ. ನಷ್ಟ