newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಮಾಘ ಮಾಸ ಶುಕ್ಲ ಪಕ್ಷ ಏಕಾದಶಿ
08-02-2025, ಶನಿವಾರ
# ಜಯ ಏಕಾದಶಿ
# ಮಹಾರಾಣಾ ಪ್ರತಾಪ ಸ್ಮೃತಿದಿನ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 08/02/2025
ತಿಂಗಳು – ಫೆಬ್ರವರಿ
ಬಣ್ಣ – ನೀಲಿ/ಕಪ್ಪು
ವಾರ – ಶನಿವಾರ
ತಿಥಿ – ಏಕಾದಶಿ 20:15:23
ಪಕ್ಷ – ಶುಕ್ಲ
ನಕ್ಷತ್ರ – ಮೃಗಶಿರ 18:05:58
ಯೋಗ – ವೈಧೃತಿ 14:03:07
ಕರಣ – ವಾಣಿಜ 08:48:15
ಕರಣ – ವಿಷ್ಟಿ (ಭದ್ರ)20:15:23
ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರ ರಾಶಿ – ಮಿಥುನ
ಸೂರ್ಯ ರಾಶಿ – ಮಕರ
ಋತು – ಶಿಶಿರ
ಸೂರ್ಯೋದಯ 06:45:30
ಸೂರ್ಯಾಸ್ತ 18:22:15
ಹಗಲಿನ ಅವಧಿ 11:36:45
ರಾತ್ರಿಯ ಅವಧಿ 12:22:57
ಚಂದ್ರೋದಯ 14:30:37
ಚಂದ್ರಾಸ್ತ 28:00:22*
ರಾಹು ಕಾಲ 09:40 – 11:07ಅಶುಭ
ಯಮಘಂಡ ಕಾಲ 14:01 – 15:28 ಅಶುಭ
ಗುಳಿಕ ಕಾಲ 06:46 – 08:13
ಅಭಿಜಿತ್ 12:11 – 12:57 ಶುಭ
ದುರ್ಮುಹೂರ್ತ 08:18 – 09:05 ಅಶುಭ
—
ಇಂದಿನ ಮಾತು
ಜಗತ್ತಿನ ಎಲ್ಲ ಶಕ್ತಿಗಳು, ನಿನ್ನ ಮನದ ಶಕ್ತಿಯ ಮುಂದೆ ನಗಣ್ಯ. ಆದ್ದರಿಂದಲೇ ನೀನು ಏನು ಬಯಸುತ್ತೀಯೋ ಹಾಗೆಯೇ ಆಗುವೆ.
—
ಇಂದಿನ ಸುಭಾಷಿತ
ಲೋಕಯಾತ್ರಾ ಭಯಂ ಲಜ್ಜಾ
ದಾಕ್ಷಿಣ್ಯಂ ಧರ್ಮಶೀಲತಾ |
ಪಂಚ ಯತ್ರ ನ ವಿದ್ಯಂತೇ
ನ ಕುರ್ಯಾತ್ ತತ್ರ ಸಂಸ್ಥಿತಿಮ್ ||
(ಚಾಣಕ್ಯನೀತಿ)
ಜೀವನವೃತ್ತಿ (ಜೀವನ ನಿರ್ವಹಣಾ ಕ್ರಮ), ಪಾಪಭೀತಿ (ಕಾನೂನಿನ ಬದ್ಧತೆ), ನಾಚಿಕೆ (ಗೌರವಯುತ ನಡೆ), ದಾಕ್ಷಿಣ್ಯ (ದಯೆ), ಧರ್ಮಶೀಲತೆ (ಧಾರ್ಮಿಕ ಪ್ರವೃತ್ತಿ) – ಈ ಐದೂ ಇಲ್ಲದ ಕಡೆ ವಾಸಿಸಬಾರದು.
—
ಇಂದಿನ ಪದಾರ್ಥ
ಅಧಿಪ = A ruler, a commander, a regent
ಅಧಿಭೂ = A master, a superior.
—+
ಇಂದಿನ ಓದು
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ ||
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ ||
ಹೀಗೆ ವಿಘ್ನ ನಿವಾರಕ ಗಣಪತಿ ಸ್ತುತಿ ಮೊದಲಿಗೆ. ವಿಷ್ಣು ಸಹಸ್ರನಾಮ ಭಗವಂತನ ‘ವಿಶ್ವಮ್’ ಎನ್ನುವ ವಿಘ್ನನಿವಾರಕ ‘ವಿಶ್ವಂಭರ’ ರೂಪದ ನಾಮದಿಂದ ಪ್ರಾರಂಭವಾಗುತ್ತದೆ. ನಮ್ಮ ಜೀವನದಲ್ಲಿರುವ ಮೂರು ಅವಸ್ಥೆಗಳಲ್ಲಿ (ಎಚ್ಚರ-ಕನಸು-ನಿದ್ದೆ), ನಮ್ಮ ಎಚ್ಚರವನ್ನು ನಿಯಂತ್ರಿಸುವ ಭಗವಂತನ ರೂಪ ‘ವಿಶ್ವ’ ನಾಮಕ ರೂಪ.
ವಿಘ್ನನಾಶಕ ವಿಶ್ವಂಭರನಾಗಿ, ನಮಗೆ ಎಚ್ಚರವನ್ನು ಕೊಟ್ಟು, ವಿಷ್ಣುಸಹಸ್ರನಾಮ ಚಿಂತನೆ ಮಾಡುವಂತೆ ಮಾಡು ಎಂದು ಆ ಭಗವಂತನಲ್ಲಿ ಪ್ರಾರ್ಥಿಸಿ, ಆತನ ನಾಮದಲ್ಲಿ ಅವನ ಗುಣದ ಅನುಸಂಧಾನ ಮಾಡೋಣ..
🌷🌺🙏🌺🌷