newsics.com
ನವದೆಹಲಿ: ಭಾರತವು ತಂತ್ರಜ್ಞಾನ ಕೇಂದ್ರದಲ್ಲಿ ಮತಹ್ವದ ಸಾಧನೆಗಳನ್ನು ಮಾಡುತ್ತಿದೆ. ಈ ಪೈಕಿ ಜಾಗತಿಕವಾಗಿ ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾವನ್ನು ಅಳವಡಿಸಿಕೊಳ್ಳುವಲ್ಲಿ, ವಿವಿಧ ರಂಗದಲ್ಲಿ ಬಳಕೆ ಮಾಡುವಲ್ಲಿ ಭಾರತ ಸರ್ಕಾರ ಮುಂದಿದೆ.
ಇದೀಗ ಬಜೆಟ್ ನಲ್ಲಿ AI ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡುವುದಾಗಿ ತಿಳಿಸಿದೆ.
ಪ್ರಸಕ್ತ ಸಾಲಿನ ಕೆಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರೂಪಾಯಿ 500 ಕೋಟಿ ಬೃಹತ್ ವೆಚ್ಚದಲ್ಲಿ ಶಿಕ್ಷಣ ರಂಗದ ಏಳಿಗೆಗಾಗಿ, AI ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದಷ್ಟೇ ಅಲ್ಲದೇ ಆರೋಗ್ಯ ವಲಯದಲ್ಲೂ ಸಹ AI ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಈ ಮೂಲಕ ತಂತ್ರಜ್ಞಾನ ವಲಯದಲ್ಲಿ ಮಹತ್ವದ ಬದಲಾವಣೆಗಳ ಆಗಲಿವೆ.
ಒಂದು ದೇಶ ಅಭಿವೃದ್ಧಿ ಆಗಲು ಅಲ್ಲಿನ ಜನರು ಶಿಕ್ಷಣ ಹೊಂದುವುದು ಅತೀ ಮುಖ್ಯವಾಗಿರುತ್ತದೆ. ಆ ಶಿಕ್ಷಣವು ಗುಣಮಟ್ಟದ್ದು, ಹಾಗೂ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಶಿಕ್ಷಣ ದೊರೆಯುವುದು ಮುಖ್ಯವಾಗಿರುತ್ತದೆ. ಈ ವಲಯದ ಮೇಲೂ ತಂತ್ರಜ್ಞಾನ ಪ್ರಭಾವ ಭೀರಿದೆ. ಭಾರತೀಯ ಶಿಕ್ಷಣ ರಂಗದ ಸುಧಾರಣೆಗಾಗಿ ದೇಶದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ AI ಕೇಂದ್ರ ಸ್ಥಾಪನೆ ಆಗಲಿದೆ.
ಅಲ್ಲದೇ, ಮೊಬೈಲ್ ಬಳಕೆದಾರರಿಗೆ ಬಜೆಟ ನಲ್ಲಿ ಖುಷಿಯ ಸುದ್ದಿ ಸಿಕ್ಕಿದೆ.
ಮೊಬೈಲ್ ಫೋನ್ಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಹಾಗೆ ಎಲ್ಇಡಿ ಮತ್ತು ಎಲ್ಸಿಡಿ ಟಿವಿಗಳ ಬೆಲೆಯಲ್ಲಿ ಇಳಿಕೆಯಾಗಿದೆ.
ಲೀಥಿಯಂ ಬ್ಯಾಟರಿಗಳ ಬೆಲೆಯಲ್ಲಿ ಇಳಿಕೆ ಹಾಗೂ ಕ್ಯಾನ್ಸರ್ ಔಷಧಿಗಳ ಬೆಲೆಯಲ್ಲಿ ಇಳಿಕೆ ಮತ್ತು ಎಲೆಕ್ಟ್ರಿಕ್ ಬೈಕ್ ಖರೀದಿದಾರರಿಗೂ ದೊಡ್ಡ ಖುಷಿಯ ಸುದ್ದಿ ನೀಡಿರುವ ಕೇಂದ್ರ ಸರ್ಕಾರ ಅವುಗಳ ಬೆಲೆಯಲ್ಲಿಯೂ ಇಳಿಕೆ ಮಾಡಿದೆ.