newsics.com
ಬೆಂಗಳೂರು: ಆನ್ಲೈನ್ ಬೆಟ್ಟಿಂಗ್ ಆಡಲು ಕಂಪನಿಗೆ ಸೇರಿದ್ದ 7 ಕೋಟಿ ರೂ. ದುರ್ಬಳಕೆ ಮಾಡಿಕೊಂಡ ಆರೋಪದಡಿ ಒಬ್ಬ ಉದ್ಯೋಗಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಮಾವಳ್ಳಿಯಲ್ಲಿ ವಾಸಿಸುತ್ತಿದ್ದ ಶ್ರೀಕಾಂತ್(23) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲ್ಯಾಂಗ್ ಫೋರ್ಡ್ ರಸ್ತೆಯಲ್ಲಿರುವ ಅರ್ನಸ್ಟ್ ಅಂಡ್ ಯಂಗ್ ಎಲ್ಎಲ್ಪಿ ಕಂಪನಿಯ ಅಧಿಕಾರಿ ಶೌರಿ ರಾಜನ್ ಎಂಬುವರು ನೀಡಿದ ದೂರಿನ ಆಧಾರ ಮೇಲೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ಕಂಪನಿಗಳಿಗೆ ಹಣಕಾಸು ವಹಿವಾಟಿನ ಸೇವೆ ನೀಡುತ್ತಿದೆ. ಕಾಡುಬೀಸನಹಳ್ಳಿಯಲ್ಲಿರುವ ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿಗೂ ಅಕೌಂಟಿಂಗ್ ಸರ್ವಿಸ್ ನೀಡುತ್ತದೆ. ಆರೋಪಿ ಶ್ರೀಕಾಂತ್ ಕಂಪನಿಯಲ್ಲಿ 2023ರ ಆಗಸ್ಟ್ ನಿಂದ ಅಸೋಸಿಯೇಟ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಆಲ್ ಇಂಡಿಯಾ ಸ್ವಿಗ್ಗಿ ಕಂಪನಿಯ ವಿದ್ಯುತ್ ಬಿಲ್ ಪಾವತಿಸುವ ಜವಾಬ್ದಾರಿಯನ್ನು ಕಂಪನಿ, ಶ್ರೀಕಾಂತ್ಗೆ ವಹಿಸಿತ್ತು. ಸ್ವಿಗ್ಗಿ ಕಂಪನಿಯು ಇದಕ್ಕಾಗಿ ಪ್ರತಿ ತಿಂಗಳು 1 ರಿಂದ 2 ಕೋಟಿ ರೂ.ವರೆಗೂ ಕಂಪನಿಗೆ ಪಾವತಿಸುತ್ತಿತ್ತು. ಶ್ರೀಕಾಂತ್ ಈ ಹಣವನ್ನು ಬೆಟ್ಟಿಂಗ್ ಆಡಲು ಬಳಸಿಕೊಂಡು ಕಂಪನಿಗೆ ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.