newsics.com
ಬೆಂಗಳೂರು: ಮಲ ತಂದೆಯೊಬ್ಬ ತನ್ನ ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ನಡೆದಿದೆ.
ಬಾಗಲಗುಂಟೆ ಠಾಣೆಯ ಪೊಲೀಸರು ಮಕ್ಕಳನ್ನು ರಕ್ಷಿಸಿದ್ದಾರೆ. ರಾಕ್ಷಸ ಅಪ್ಪನ ಕ್ರೂರತನವನ್ನು ಎಳೆಎಳೆಯಾಗಿ ಮಕ್ಕಳು ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನ ದಾಸರಹಳ್ಳಿಯ ಮಲ್ಲಸಂದ್ರದ ನಿವಾಸಿಯಾಗಿರುವ ಸಂತೋಷ್ ಈ ಕೃತ್ಯವೆಸಗಿದ್ದಾನೆ. ಮಕ್ಕಳು ಹೇಳಿದ ಮಾತು ಕೇಳಲ್ಲ ಎಂದು ತನ್ನ 9 ವರ್ಷದ ಹೆಣ್ಣು ಮಗು ಮತ್ತು 6 ವರ್ಷದ ಗಂಡು ಮಗುವಿಗೆ ನೀರು ಬಿಸಿ ಮಾಡುವ ಹೀಟರ್‌ನಿಂದ ಬರೆ ಎಳೆದಿದ್ದಾರೆ. ಹೀಟರ್‌ನಿಂದ ಬರೆ ಹಾಕಿದ್ದರಿಂದ ಪುಟ್ಟ ಮಕ್ಕಳು ಗಾಯಗೊಂಡಿದ್ದಾರೆ. ಸಪ್ತಗಿರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ.
ಮಧುಗಿರಿ ಮೂಲದ ಸಂತೋಷ್ ಬಾಡಿಗೆ ಮನೆಯಲ್ಲಿ ವಾಸವಿದ್ದು, ಖಾಸಗಿ ಕಂಪನಿಯ ಮೊಬೈಲ್ ಟವರ್ ಮೆಕ್ಯಾನಿಕ್ ಆಗಿದ್ದಾರೆ. ಯಶವಂತಪುರದ ಮೊಬೈಲ್ ಶಾಪ್‌ನಲ್ಲಿ ಪತ್ನಿ ಅಂಜಲಿ ಕೂಡ ಕೆಲಸ ಮಾಡುತ್ತಾರೆ. ಮಕ್ಕಳನ್ನು ಶಾಲೆಗೆ ಕಳಿಸದೆ ನಿತ್ಯವೂ ಮನೆಯಲ್ಲಿ ತಂದೆ ಸಂತೋಷ್ ಕೂಡಿಹಾಕುತ್ತಿದ್ದರು. ಮಕ್ಕಳ ಕಿರುಚಾಟ ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಬಾಗಲಗುಂಟೆ ಠಾಣೆಯ ಪೊಲೀಸರು ಮಕ್ಕಳ ರಕ್ಷಣೆ ಮಾಡಿದ್ದರೆ. ಬಳಿಕ ತಾಯಿಗೆ ಕರೆ ಮಾಡಿ ತಿಳಿಸಿದ್ದಾರೆ.
ಅಂಜಲಿಗೆ 10 ವರ್ಷಗಳ ಹಿಂದೆ ಬಿಎಂಟಿಸಿ ಚಾಲಕ ಮುರಳಿ ಜತೆ ವಿವಾಹವಾಗಿತ್ತು. ಬಳಿಕ ಪತಿಯ ಅನೈತಿಕ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳ ಆರೋಪದ ಮೇರೆಗೆ ಡಿವೋರ್ಸ್ ಪ್ರಕರಣದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಮೂರ್ನಾಲ್ಕು ತಿಂಗಳಿಂದ ಅಂಜಲಿ ಸಂತೋಷ್ ಜತೆ ಊರಿನಲ್ಲಿದ್ದರು. ಮಕ್ಕಳು ಹೇಳಿದ ಮಾತು ಕೇಳಲ್ಲ ಎಂದು ಸಂತೋಷ್ ಘೋರ ಶಿಕ್ಷೆ ನೀಡಿದ್ದಾರೆ.
King is back | ನಾನೀಗ ಸೂಪರ್, ‘ಕಿಂಗ್ ಈಸ್ ಬ್ಯಾಕ್’ ಎಂದ ಹ್ಯಾಟ್ರಿಕ್ ಹೀರೋ ಶಿವಣ್ಣ
Chaitra, Gautham rejected prize | ಖೋ ಖೋ ವಿಶ್ವಕಪ್: ರಾಜ್ಯ ಸರ್ಕಾರದ ಬಹುಮಾನ ತಿರಸ್ಕರಿಸಿದ ಚೈತ್ರಾ, ಗೌತಮ್
Actress Nikhita Nayyar is no more | ತೀರಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ನಟಿ ನಿಖಿತಾ ನಯ್ಯಾರ್ ಇನ್ನಿಲ್ಲ