newsics.com
ಬೆಂಗಳೂರು : ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ತಾರಾ ಅನುರಾಧಾ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.
‘ತುಂಬ ಹೆಮ್ಮೆ ಎನಿಸುತ್ತಿದೆ. ಕಲಾವಿದೆಯಾಗಿ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರಬಹುದು. ಆದರೆ ಮಹಿಳಾ ವಿಶ್ವವಿದ್ಯಾಲಯ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ನನ್ನ ಗುರು-ಹಿರಿಯರ ಆಶೀರ್ವಾದ ಅಂತ ಭಾವಿಸುತ್ತೇನೆ ಎಂದಿದ್ದಾರೆ.
ಕಳೆದ ಜನ್ಮದಲ್ಲಿ ನಾನು ಉತ್ತರ ಕರ್ನಾಟಕದವಳೇ ಆಗಿರಬೇಕು. ಮೊದಲು ಎಂಎಲ್ಸಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದು ಇಲ್ಲೇ. ಅದೆಲ್ಲ ಒಳ್ಳೆಯ ನೆನಪುಗಳು’ ಎಂದು ತಾರಾ ಅವರು ಹೇಳಿದ್ದಾರೆ.