newsics.com
ನವದೆಹಲಿ : ಕನ್ನಡಕದಲ್ಲಿ ಹಿಡನ್ ಕ್ಯಾಮೆರಾ ಬಳಸಿ ಅಯೋಧ್ಯೆಯ ರಾಮಮಂದಿರದ ಒಳಗಿನ ದೃಶ್ಯ ಸೆರೆಹಿಡಿದ ಯುವಕ ಅರೆಸ್ಟ್ ಆಗಿದ್ದಾನೆ.
ರಾಮಮಂದಿರದಲ್ಲಿ ಖಾಸಗಿತನ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮೊಬೈಲ್ ಫೋನ್‌ಗಳು ಮತ್ತು ಕ್ಯಾಮೆರಾಗಳ ಮೇಲೆ ಕಟ್ಟುನಿಟ್ಟಾದ ನಿಷೇಧವನ್ನು ಜಾರಿಗೊಳಿಸಲಾಗಿದೆ. ಆದರೂ ವಡೋದರಾದ ಯುವಕನೊಬ್ಬ ತನ್ನ ಕನ್ನಡದಲ್ಲಿ ಹಿಡನ್ ಕ್ಯಾಮೆರಾ ಇರಿಸಿಕೊಂಡು ರಾಮಮಂದಿರದ ಒಳಗಿನ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ.
ವಡೋದರಾದ ಜಯಕುಮಾರ್ ಎಂಬ ಯುವಕ ತನ್ನ ಕನ್ನಡಕದಲ್ಲಿದ್ದ ಕ್ಯಾಮೆರಾದ ಮೂಲಕ ಅಯೋಧ್ಯೆಯ ರಾಮಮಂದಿರದ ಫೋಟೋಗಳನ್ನು ತೆಗೆಯಲು ಪ್ರಯತ್ನಿಸಿದ್ದಕ್ಕಾಗಿ ಬಂಧಿಸಲಾಯಿತು.
ಅಯೋಧ್ಯೆಯ ರಾಮಮಂದಿರದೊಳಗೆ ಕನ್ನಡಕದಲ್ಲಿ ಕ್ಯಾಮರಾ ಅಡಗಿಸಿ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದ ಆ ಯುವಕನನ್ನು ಬಂಧಿಸಲಾಗಿದೆ.