newsics.com
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರ ಬಂದಿರುವ ನಟ ದರ್ಶನ್ಗೆ ಅನಾರೋಗ್ಯ ಕಾಡುತ್ತಲೇ ಇದೆ. ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಡಿಸ್ಕ್ನ ಸಮಸ್ಯೆಯಿಂದಾಗಿ ಈ ರೀತಿ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಈಗ ದರ್ಶನ್ ಅವರಿಗೆ ಆಪರೇಷನ್ ಮಾಡುವುದು ಅನಿವಾರ್ಯವಾಗಿದೆ.
ಬೆಂಬಿಡದೆ ಕಾಡುತ್ತಿರುವ ಬೆನ್ನು ನೋವು ವಾಸಿಯಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ, ಬೇರೆ ದಾರಿ ಕಾಣದೆ ದರ್ಶನ್ ಅವರು ಆಪರೇಷನ್ಗೆ ಒಪ್ಪಿಗೆ ಕೊಟ್ಟಿದ್ದಾರೆ.
ದರ್ಶನ್ ಅವರು ಐಷಾರಾಮಿ ಜೀವನ ನಡೆಸಿದವರು. ಈ ಕಾರಣಕ್ಕೆ ಜೈಲು ವಾಸ ಅವರಿಗೆ ಕಷ್ಟ ಆಯಿತು. ಜೈಲಿನಲ್ಲಿ ಕೂರಲು, ಮಲಗಲು ಅವರಿಗೆ ಬೇಕಾದ ರೀತಿಯ ವ್ಯವಸ್ಥೆ ತಕ್ಷಣಕ್ಕೆ ಸಿಗದೆ ಬೆನ್ನು ನೋವು ಆರಂಭವಾಯಿತು. ದರ್ಶನ್ ಅವರು ಆಪರೇಷನ್ ನೀಡಿ ಮಧ್ಯಂತರ ಜಾಮೀನು ಪಡೆದರು. ಇಷ್ಟು ದಿನ ಅವರು ಫಿಸಿಯೋಥೆರಪಿ ಮೂಲಕವೇ ನೋವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ, ಅವರು ಆಪರೇಷನ್ ಮಾಡಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಂಕ್ರಾತಿ ವೇಳೆಗೆ ದರ್ಶನ್ ಆಪರೇಷನ್ ಮಾಡಿಸಿಕೊಳ್ಳಲಿದ್ದಾರೆ. ಮೈಸೂರಿನಲ್ಲಿಯೇ ಆಪರೇಷನ್ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ದರ್ಶನ್ ಅವರಿಗೆ ವೈದ್ಯ ಅಜಯ್ ಹೆಗಡೆ ಅವರು ಚಿಕಿತ್ಸೆ ನೀಡುತ್ತಿದ್ದಾರೆ.
ಆಪರೇಷನ್ ನಡೆದ ಒಂದುವರೆ ತಿಂಗಳವರೆಗೂ ಫೈಟ್ ದೃಶ್ಯದಲ್ಲಿ ದರ್ಶನ್ ಭಾಗಿಯಾಗುವಂತಿಲ್ಲ. ಕೇವಲ ಚಿತ್ರೀಕರಣದಲ್ಲಿ ಮಾತ್ರ ಭಾಗಿಯಾಗಬಹುದು ಎನ್ನಲಾಗಿದೆ. ಅಂದರೆ ಅವರು ‘ಡೆವಿಲ್’ ಸಿನಿಮಾದ ಸಾಮಾನ್ಯ ದೃಶ್ಯಗಳ ಶೂಟ್ನಲ್ಲಿ ಭಾಗಿ ಆಗಬಹುದು. ಫೆಬ್ರವರಿಯಲ್ಲಿ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಚಿತ್ರೀಕರಣ ಆರಂಭ ಆದ ಬಳಿಕ ಮತ್ತೆ ಬೆನ್ನು ನೋವು ಹೆಚ್ಚಿದರೆ ಸಿನಿಮಾ ಕೆಲಸ ವಿಳಂಬ ಆಗುತ್ತದೆ. ಈ ಕಾರಣದಿಂದಲೇ ಸರ್ಜರಿ ಬಳಿಕವೇ ಶೂಟಿಂಗ್ಗೆ ತೆರಳಲು ಅವರು ನಿರ್ಧರಿಸಿದ್ದಾರೆ.
ಡೆವಿಲ್’ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಈ ಚಿತ್ರದ ಒಂದಷ್ಟು ಭಾಗದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಉಳಿದ ಶೂಟಿಂಗ್ ಪೂರ್ತಿಗೊಳಿಸಿ ಸಿನಿಮಾವನ್ನು ಈ ವರ್ಷವೇ ರಿಲೀಸ್ ಮಾಡುವ ಆಲೋಚನೆ ಚಿತ್ರ ತಂಡಕ್ಕೆ ಇದೆ.
Cancer risk from alcohol ಮದ್ಯಪಾನದಿಂದ 7 ಬಗೆಯ ಕ್ಯಾನ್ಸರ್ ಅಪಾಯ: ಅಮೆರಿಕ ತಜ್ಞ ವೈದ್ಯರು ಹೇಳಿದ್ದೇನು?