Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 7 years of struggle ಒಂದೂವರೆ ರೂಪಾಯಿಗಾಗಿ 7 ವರ್ಷ ಹೋರಾಟ: ಗ್ಯಾಸ್ ಏಜೆನ್ಸಿ ವಿರುದ್ಧ ಗೆದ್ದ ಚಕ್ರೇಶ್ ಜೈನ್! ಏನಿದು ವಿವಾದ?
ದೇಶಪ್ರಮುಖ

7 years of struggle ಒಂದೂವರೆ ರೂಪಾಯಿಗಾಗಿ 7 ವರ್ಷ ಹೋರಾಟ: ಗ್ಯಾಸ್ ಏಜೆನ್ಸಿ ವಿರುದ್ಧ ಗೆದ್ದ ಚಕ್ರೇಶ್ ಜೈನ್! ಏನಿದು ವಿವಾದ?

Share
2 Min Read
SHARE

newsics.com

ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯ ಚಕ್ರೇಶ್‌ ಜೈನ್‌ ಎನ್ನುವ ವ್ಯಕ್ತಿ ಬರೀ 1.50 ರೂಪಾಯಿಗಾಗಿ ಬರೋಬ್ಬರಿ 7 ವರ್ಷಗಳ ಕಾಲ ಗ್ಯಾಸ್‌ ಏಜೆನ್ಸಿ ವಿರುದ್ಧ ಹೋರಾಟ ಮಾಡಿದ್ದಾರೆ.

ಇಷ್ಟು ಸಣ್ಣ ಮೊತ್ತಕ್ಕಾಗಿ ಅವರು ಗ್ಯಾಸ್‌ ಏಜೆನ್ಸಿಯನ್ನು ಕೋರ್ಟ್‌ ಮೆಟ್ಟಿಲು ಹತ್ತಿಸಿದ್ದಾರೆ. ಕೇಸ್‌ನ ವಿಚಾರದಲ್ಲಿ ಅತ್ಯಂತ ಬದ್ಧತೆಯಿಂದ ನಡೆದುಕೊಂಡಿದ್ದು ಚಕ್ರೇಶ್‌ ಜೈನ್‌ಗೂ ಫಲ ನೀಡಿದ್ದು, ಗ್ರಾಹಕ ನ್ಯಾಯಾಲಯ ಇವರ ಪರವಾಗಿಯೇ ತೀರ್ಪು ನೀಡಿದೆ. ತೀರ್ಪಿನಲ್ಲಿ ಬರುವ ಹಣಕ್ಕಿಂತ ಗ್ಯಾಸ್‌ ಏಜೆನ್ಸಿ ವಿರುದ್ಧ ಗೆದ್ದಿದ್ದು ಚಕ್ರೇಶ್‌ಗೆ ಖುಷಿ ನೀಡಿದೆ.

2017ರ ನವೆಂಬರ್‌ 14 ರಂದು ಭಾರತ್‌ ಗ್ಯಾಸ್‌ ಏಜೆನ್ಸಿಯಿಂದ ಚಕ್ರೇಶ್‌ ಜೈನ್‌ ಗ್ಯಾಸ್‌ ಬುಕ್‌ ಮಾಡಿದ್ದರು. ಸಿಲಿಂಡರ್‌ನ ಬಿಲ್‌ 753.50 ರೂಪಾಯಿ ಆಗಿತ್ತು. ಆದರೆ, ಗ್ಯಾಸ್‌ ಡೆಲಿವರಿ ಮಾಡಲು ಬಂದಿದ್ದ ವ್ಯಕ್ತಿ 755 ರೂಪಾಯಿ ಕಲೆಕ್ಟ್‌ ಮಾಡಿದ್ದ. ಚಿಲ್ಲರೆ ಇಲ್ಲ ಎನ್ನುವ ಕಾರಣಕ್ಕೆ ಒಂದೂವರೆ ರೂಪಾಯಿ ಬಾಕಿ ಹಣವನ್ನು ಕೊಡಲು ನಿರಾಕರಿಸಿದ್ದ. ಆದರೆ, ಚಕ್ರೇಶ್‌ ಜೈನ್‌ ಈ ಹಣವನ್ನು ಕೊಡಲೇಬೇಕು ಎಂದು ಹೇಳಿದಾಗ, ಡೆಲಿವರಿ ಏಜೆಂಟ್‌, ಹಾಗಿದ್ದಲ್ಲಿ ನೀವು ಏಜೆನ್ಸಿಯನ್ನೇ ಸಂಪರ್ಕಿಸಿ ಎಂದು ತಿಳಿಸಿದ್ದ. ತಡಮಾಡದೇ ಚಕ್ರೇಶ್‌ ಜೈನ್‌, ಗ್ಯಾಸ್‌ ಏಜನ್ಸಿ ಹಾಗೂ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.

ಚಕ್ರೇಶ್‌ ಜೈನ್ ನೀಡಿದ ಆರಂಭಿಕ ದೂರಿಗೆ ಮೊದಲು ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಬಳಿಕ 2019ರ ಜುಲೈ 15 ರಂದು ಜಿಲ್ಲಾ ಗ್ರಾಹಕ ನ್ಯಾಯಲಯದಲ್ಲಿ ಚಕ್ರೇಶ್‌ ಜೈನ್‌ ಕೇಸ್‌ ದಾಖಲು ಮಾಡಿದ್ದರು. ಗ್ಯಾಸ್‌ ಏಜೆನ್ಸಿ ಇದೊಂದು ಕ್ಷುಲ್ಲಕ ಪ್ರಕರಣ ಎಂದಿದ್ದಲ್ಲದೆ, ಕೇಸ್‌ ದಾಖಲು ಮಾಡಿದ್ದ ಚಕ್ರೇಶ್‌ ಜೈನ್‌ರನ್ನು ಅಪಹಾಸ್ಯ ಮಾಡಿತ್ತು. ಆದರೆ, ಚಕ್ರೇಶ್‌ ಮಾತ್ರ ತನ್ನ ವಕೀಲ ರಾಜೇಶ್‌ ಸಿಂಗ್‌ ಬೆಂಬಲದೊಂದಿಗೆ ಈ ಕೇಸ್‌ನಲ್ಲಿ ಅಚಲವಾಗಿ ನಿಂತಿದ್ದರು.

ಅಂದಾಜು ಐದು ವರ್ಷಗಳ ವಿಚಾರಣೆಯ ಬಳಿಕ, ಈ ವಿಚಾರದಲ್ಲಿ ಗ್ಯಾಸ್‌ ಏಜೆನ್ಸಿ ಸೇವೆಯಲ್ಲಿ ನಿಲ್ಷಕ್ಯ ತೋರಿದೆ ಎಂದು ಹೇಳಿದ್ದಲ್ಲದೆ, ಮಹತ್ವದ ತೀರ್ಪು ಕೂಡ ಪ್ರಕಟಿಸಿದೆ. ಎರಡು ತಿಂಗಳ ಒಳಗಾಗಿ ಚಕ್ರೇಶ್‌ ಜೈನ್‌ ಅವರ 1.50 ರೂಪಾಯಿ ಹಣವನ್ನು ವಾರ್ಷಿಕ ಶೇ. 6ರ ಬಡ್ಡಿಯೊಂದಿಗೆ ವಾಪಫಸ್‌ ನೀಡಬೇಕು. ಅದರೊಂದಿಗೆ ಜೈನ್‌ ಅವರ ಮಾನಸಿಕ, ಆರ್ಥಿಕ ಮತ್ತು ಸೇವಾ ಸಂಬಂಧಿತ ಸಂಕಷ್ಟಗಳಿಗೆ ಪರಿಹಾರವಾಗಿ 2,000 ರೂಪಾಯಿಗಳನ್ನು ಮತ್ತು ಅವರ ಕಾನೂನು ವೆಚ್ಚವನ್ನು ಭರಿಸಲು ಇನ್ನೊಂದು 2,000 ರೂಪಾಯಿಗಳನ್ನು ಪಾವತಿಸಲು ಏಜೆನ್ಸಿಗೆ ಸೂಚಿಸಲಾಗಿದೆ.

ಈ ಪ್ರಕರಣವು ಗ್ರಾಹಕರ ಹಕ್ಕುಗಳ ಮಹತ್ವವನ್ನು ಒತ್ತಿಹೇಳುತ್ತದೆ. ಚಕ್ರೇಶ್ ಜೈನ್ ಅವರ ಹೋರಾಟವು ವ್ಯವಹಾರಗಳಿಗೆ ಎಚ್ಚರಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಗ್ರಾಹಕರನ್ನು ನ್ಯಾಯಯುತವಾಗಿ ಪರಿಗಣಿಸುವ ಮತ್ತು ನೈತಿಕ ಅಭ್ಯಾಸಗಳನ್ನು ಎತ್ತಿಹಿಡಿಯುವ ಅವರ ಜವಾಬ್ದಾರಿಯನ್ನು ನೆನಪಿಸುತ್ತದೆ. ಇದು ಕೇವಲ 1.50 ರೂ ಆಗಿರಲಿಲ್ಲ; ಇದು ನಮ್ಮ ಹಕ್ಕುಗಳು ಮತ್ತು ಸ್ವಾಭಿಮಾನದ ಹೋರಾಟವಾಗಿತ್ತು ಎಂದು ಚಕ್ರೇಶ್ ಜೈನ್ ಹೇಳಿದ್ದಾರೆ.

New virus in China ಚೀನಾದಲ್ಲಿ ಹೊಸ ವೈರಸ್: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಸೂಚನೆಯೇನು?

Divorce shortly ಯಜುವೇಂದ್ರ ಚಹಾಲ್- ಧನಶ್ರೀ ಸೋಷಿಯಲ್ ಮೀಡಿಯಾದಲ್ಲೂ ದೂರ, ಶೀಘ್ರದಲ್ಲೇ ವಿಚ್ಛೇದನ

TAGGED:7 years of struggle for one and a half rupees: Chakresh Jain won against the gas agency! What is the controversy?
Share This Article
Facebook Twitter Copy Link Print
Previous Article Divorce shortly ಯಜುವೇಂದ್ರ ಚಹಾಲ್- ಧನಶ್ರೀ ಸೋಷಿಯಲ್ ಮೀಡಿಯಾದಲ್ಲೂ ದೂರ, ಶೀಘ್ರದಲ್ಲೇ ವಿಚ್ಛೇದನ
Next Article Girl died ಮರದ ತುಂಡು ಬಿದ್ದು ಶಾಲೆಯಿಂದ ಮರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?