newsics.com
‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಇನ್ನು ಉಳಿದಿರುವುದು ಕೆಲವೇ ದಿನಗಳು ಮಾತ್ರ. ಫಿನಾಲೆ ಸಮೀಪ ಆದಂತೆಲ್ಲ ಪೈಪೋಟಿಯ ಕಾವು ಜೋರಾಗುತ್ತಿದೆ.
ಹೌದು, ಸೂಪರ್ ಸಂಡೇ ಕಾರ್ಯಕ್ರಮದಲ್ಲಿ ಕಿಚ್ಚ ಸದೀಪ್ ಮನೆಯವರಿಗೆ ಒಂದು ಚಟುವಟಿಕೆ ಕೊಟ್ಟಿದ್ದಾರೆ. ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳ ಮುಂದೆ ಅವರಲ್ಲಿ ಇದು ಇಷ್ಟ ಇಲ್ಲ, ಇದನ್ನು ಅವರು ಬದಲಾಯಿಸಿಕೊಳ್ಳಬೇಕು ಎಂಬುವುದನ್ನು ಹೇಳಿ ಆ ತಟ್ಟೆಯನ್ನು ಸುತ್ತಿಗೆಯಿಂದ ಹೊಡೆದು ಬ್ರೇಕ್ ಮಾಡಬೇಕು ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ.
ಆಗ ಚೈತ್ರಾ ಕುಂದಾಪುರ ರಜತ್ ಅವರ ಫೋಟೋವನ್ನು ಅಂಟಿಸಿ ತಟ್ಟೆಯನ್ನು ಹೊಡೆದಿದ್ದಾರೆ. ಜೊತೆಗೆ ತಮಾಷೆಗೂ, ವ್ಯಂಗ್ಯ ಅಪಹಾಸ್ಯಕ್ಕೆ ತುಂಬಾನೇ ವ್ಯತ್ಯಾಸ ಇದೆ ಸರ್ ಅಂತ ಹೇಳುತ್ತಾ ಚೈತ್ರಾ, ರಜತ್ಗೆ ಟಾಂಗ್ ಕೊಟ್ಟಿದ್ದಾರೆ. ಇಂದು ರಾತ್ರಿ 9.00 ಗಂಟೆಗೆ ಪ್ರಸಾರವಾಗುವ ಎಪಿಸೋಡ್ನಲ್ಲಿ ಚೈತ್ರಾ ಕುಂದಾಪುರ ಇನ್ನೇನು ಅಂದಿದ್ದಾರೆ ಅಂತ ಗೊತ್ತಾಗಲಿದೆ.
https://www.instagram.com/reel/DEKEVc2td4V/?igsh=MWZwNWdvdm8wOGZ3dQ==