newsics.com
ಬೆಳಗಾವಿ: ಈಜುಕೊಳದಲ್ಲಿ ಹಾಡುತ್ತಾ, ಕುಣಿಯುತ್ತಾ ಖುಷಿಯಲ್ಲಿ ಸಹದ್ಯೋಗಿಗಳೊಂದಿಗೆ ಮಸ್ತ್ ಪಾರ್ಟಿ ಮಾಡುತ್ತಿದ್ದ ಯುವಕ ದಾರುಣ ಅಂತ್ಯ ಕಂಡಿದ್ದಾನೆ.
ಬೆಳಗಾವಿ ಜಿಲ್ಲೆ ಕಣಕುಂಬಿ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಇಂತಹದೊಂದು ಭಯಾನಕ ಘಟನೆ ನಡೆದಿದೆ.
ನಿನ್ನೆ ಸಂಜೆ ಎಲ್‌ಜಿ ಕಂಪನಿಯ ಬೆಳಗಾವಿ ಶಾಖೆಯ 22 ಜನ ಸಿಬ್ಬಂದಿ ಈ ರೆಸಾರ್ಟ್ ಪಾರ್ಟಿ ಮಾಡಲು ತೆರಳಿದ್ದರು.
ವರ್ಷದ ಮಹಾಂತೇಶ ಗುಂಜೀಕರ ಎಂಬ ಯುವಕ ಎಲ್‌ಜಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. 22 ಸಹೋದ್ಯೋಗಿಗಳ ಜೊತೆ ಮಹಾಂತೇಶ ಕೂಡ ನಿನ್ನೆ ಸಂಜೆ ಪಾರ್ಟಿ ಮಾಡಲು ಖಾಸಗಿ ರೆಸಾರ್ಟ್‌ಗೆ ತೆರಳಿದ್ದ. ಇಂದು ಬೆಳಗ್ಗೆ ಈಜುಕೊಳದಲ್ಲಿ ಇಳಿದಿದ್ದಾಗ ಮಹಾಂತೇಶ ಪ್ರಾಣ ಬಿಟ್ಟಿದ್ದಾನೆ.
ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಮೃತದೇಹವನ್ನ ತರಲಾಗಿತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.