newsics.com
ಕಲಬುರಗಿ: ನಮ್ಮ ಅತ್ತೆ ಬೇಗ ಸಾಯಬೇಕು ಅಂತ ದೇವಿಗೆ ನೋಟಿನಲ್ಲಿ ಹರಕೆ ಬರೆದು, ತೀರಿಸುವಂತೆ ಸೊಸೆಯೊಬ್ಬರು ದೇವರ ಹತ್ತರ ಬೇಡಿಕೊಂಡಿದ್ದಾರೆ.
ಹೌದು,ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದಲ್ಲಿರುವಂತ ಭಾಗ್ಯವಂತಿ ದೇವಿ ತುಂಬಾನೇ ಪ್ರಸಿದ್ಧ ದೇವಸ್ಥಾನ. ಈ ದೇವಾಲಯಕ್ಕೆ ಹಲವೆಡೆಯಿಂದ ಭಕ್ತರು ಆಗಮಿಸಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ಅದೇರೀತಿ ಸೊಸೆಯೊಬ್ಬರು 20 ರೂಪಾಯಿಯ ನೋಟಿನ ಮೇಲೆ ತಾಯಿ ನಮ್ಮ ಅತ್ತೆ ಬೇಗ ಸಾಯಲಿ ಅಂತ ಬರೆದಿದ್ದಾರೆ.
ಪ್ರತಿ ವರ್ಷ ಕಾಣಿಕೆ ಹುಂಡಿ ತೆರೆದು ಭಕ್ತರ ಕಾಣಿಕೆಯ ಎಣಿಕೆ ಮಾಡಲಾಗುತ್ತದೆ. ಈ ವೇಳೆ 60 ಲಕ್ಷ ನಗದು ಒಂದು ಕೆಜಿ ಬೆಳ್ಳಿ , 200 ಚಿನ್ನಾಭರಣ , ಹುಂಡಿಯಲ್ಲಿ ಜಮಾ ಆಗಿದೆ. ಇವುಗಳ ಮಧ್ಯೆ 20 ರೂಪಾಯಿ ನೋಟಿನ ಮೇಲೆ ಅತ್ತೆಯ ಬಗ್ಗೆ ಸೊಸೆ ಬರೆದಿರುವಂತ ನೋಟು ಪತ್ತೆಯಾಗಿರೋದು ಎಲ್ಲರಿಗೂ ಶಾಕ್ ಆಗಿದೆ.