newsics.com
ಕನ್ನಡದ ಬಿಗ್ ಬಾಸ್ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ಮಧ್ಯೆ ಮನೆ ಮಂದಿಗೆ ಕ್ಯಾಪ್ಟನ್ಸಿ ಟಾಸ್ಕ್ವೊಂದನ್ನು ನೀಡಿದ್ದಾರೆ. ಆದರೆ ಇದರ ಮಧ್ಯೆ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಮೋಸ ಮಾಡಿದ್ರಾ ಭವ್ಯಾ ಎಂಬ ಅನುಮಾನ ಮೂಡಿದೆ.
ಹೌದು, ಕಲರ್ಸ್ ಕನ್ನಡ ರಿಲೀಸ್ ಮಾಡಿದ ಹೊಸ ಪ್ರೋಮೋದಲ್ಲಿ ಬಿಗ್ಬಾಸ್ 5 ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಕೊಟ್ಟಿದ್ದಾರೆ. ಐದು ಸ್ಪರ್ಧಿಗಳು ಸಾಲಾಗಿ ನಿಂತುಕೊಂಡಿರಬೇಕು. ಆಗ ಬಿಗ್ಬಾಸ್ ಹೇಳುವ ನಂಬರ್ನಲ್ಲಿರೋ ಚೆಂಡುಗಳನ್ನು ಓಡಿಹೋಗಿ ಹಿಡಿದು ಬಾಸ್ಕೆಟ್ನಲ್ಲಿ ಹಾಕಬೇಕು.
https://www.instagram.com/reel/DEFDOBNvXKq/?igsh=MWppOXpoOXlleXZmaA==
ಅದರಂತೆ ಬಸರ್ ಆದ ಕೂಡಲೇ ಸ್ಪರ್ಧಿಗಳು ಓಡಿ ಹೋಗಿ ಬಿಗ್ಬಾಸ್ ಹೇಳಿದ ನಂಬರ್ನಲ್ಲಿರೋ ಚೆಂಡುಗಳನ್ನು ತೆಗೆದುಕೊಂಡು ಬುಟ್ಟಿಗೆ ಹಾಕಬೇಕಿತ್ತು. ಹೀಗೆ ಐದು ಸ್ಪರ್ಧಿಗಳು ಓಡುತ್ತಾ, ಜಾರಿ ಬಿಳುತ್ತಾ ಬಾಲ್ ಅನ್ನು ಹಿಡಿದು ಬುಟ್ಟಿಗೆ ಹಾಕಿದ್ದಾರೆ. ಆದರೆ ಭವ್ಯಾ ಗೌಡ ಬೇರೆ ನಂಬರ್ನಿಂದ ಬಿದ್ದ ಬಾಲ್ ಅನ್ನು ಎತ್ತಿಕೊಂಡು ಬುಟ್ಟಿಗೆ ಹಾಕಿದ್ದಾರೆ.