newsics.com
ಬಿಗ್ ಬಾಸ್ ಈ ವಾರ ಮನೆ ಮಂದಿಗೆ ವಿಭಿನ್ನವಾಗಿ ನಾಮಿನೇಷನ್ ಮಾಡುವ ಟಾಸ್ಕ್ ಕೊಟ್ಟಿದ್ದಾರೆ. ಅಲ್ಲಿ ಸ್ಪರ್ಧಿಗಳು ಮನೆಯಿಂದ ಆಚೆ ಕಳುಹಿಸಲು ಇಷ್ಟ ಪಡುವ ಇಬ್ಬರ ತಲೆ ಮೇಲೆ ಬಾಟಲಿಯಿಂದ ಹೊಡೆದು ನಾಮಿನೇಟ್ ಮಾಡಬೇಕು.
ಅದರಂತೆ, ರಿಲೀಸ್ ಆಗಿರೋ ಪ್ರೋಮೋದಲ್ಲಿ ಭವ್ಯ ಗೌಡ ಅವರು, ಐಶ್ವರ್ಯಾ ಅವರ ತಲೆಗೆ ಬಾಟಲಿ ಹೊಡೆದಿದ್ದರು. ಮೋಕ್ಷಿತಾ ಉಗ್ರಂ ಮಂಜು ತಲೆಗೆ ಬಾಟಲಿಯಿಂದ ಹೊಡೆದಿದ್ದರು. ಮತ್ತೊಂದು ಪ್ರೋಮೋದಲ್ಲಿ ರಜತ್ ಚೈತ್ರಾ ಕುಂದಾಪುರ ತಲೆಗೆ ಬಾಟಲಿ ಹೊಡೆದಿದ್ದಾರೆ. ಹಾಗೇ ಉಗ್ರಂ ಮಂಜು ತ್ರಿವಿಕ್ರಮ್ ತಲೆಗೆ ಬಾಟಲಿ ಹೊಡೆದು ನಾಮಿನೇಟ್ ಮಾಡಿದ್ದಾರೆ.
https://www.instagram.com/reel/DECV-W1NrkY/?igsh=dmY1N24wM3ZnNGww
ಹತ್ತಾರು ಡ್ರಾಮಾ ಮಾಡುತ್ತಾರೆ ಎಂಬ ಆರೋಪ ಹೊತ್ತಿರುವ ಚೈತ್ರಾ ಕುಂದಾಪುರ ಅವರನ್ನು ಕಂಡರೆ ರಜತ್ ಸಿಡಿದು ಬೀಳುತ್ತಾರೆ. ನಾಮಿನೇಷನ್ ಮತ್ತು ಕಳಪೆ ಯಾರು ಎಂಬುದನ್ನು ಆಯ್ಕೆ ಮಾಡುವ ಸಂದರ್ಭ ಬಂದಾಗ ಚೈತ್ರಾ ಹೆಸರನ್ನು ರಜತ್ ತೆಗೆದುಕೊಳ್ಳುತ್ತಾರೆ.
ಹೌದು,ನಾಮಿನೇಟ್ ಮಾಡುವಾಗ ರಜತ್ ಚೈತ್ರಾ ಕುಂದಾಪುರ್ ಗೆ, ನಮ್ಮ ಪ್ರೀತಿಯ ಚೈತ್ರಾ ಅವರು ಬೇರೆ ಬೇರೆ ಟಾಸ್ಕ್ನಲ್ಲಿ ಕಾಣಲಿಲ್ಲ, ಸೀರೆ ಒಗಿಯುವುದರಲ್ಲಿ ಕಾಣಲಿಲ್ಲ ನಿಮ್ಮ ಆ ಟ್ಯಾಲೆಂಟ್. ಇನ್ನೂ ಯಾಕಾದ್ರೂ ಬಿಗ್ಬಾಸ್ ಮನೆಯಲ್ಲಿ ಇದ್ದೀಯಮ್ಮಾ ನಿಮ್ಮ ತಮ್ಮಯ್ಯ ಹೊರಡಮ್ಮ ಮನೆಗೆ ಅಂತ ಹೇಳಿದ್ದಾರೆ.