newsics.com
ತಮಿಳುನಾಡಿನ ಶ್ರೀವಿಲ್ಲಿಪುತೂರಿನ ಆಂಡಾಳ್ ದೇವಸ್ಥಾನದ ಅರ್ಥ ಮಂಟಪಕ್ಕೆ ಸಂಗೀತ ಸಂಯೋಜಕ ಇಳಯರಾಜ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಎನ್ನಲಾಗಿದೆ.
ಆದರೆ ಈ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಗೀತ ಮಂತ್ರಿಕ ಇಳಯರಾಜ ಅಂತಹ ಘಟನೆ ನಡೆದಿಲ್ಲ, ಸುಮ್ಮನೆ ವರದಿಗಳನ್ನು ಹಬ್ಬಿಸಲಾಗುತ್ತಿದೆ ಇಂತಹ ಊಹಾಪೋಹಗಳನ್ನು ನಂಬದಿರುವಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿರುವ ದೇಗುಲದಲ್ಲಿ ಈ ಘಟನೆ ನಡೆದಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ದೇವಾಲಯದ ಅಧಿಕಾರಿಗಳು,ಅರ್ಚಕರು, ಜೀಯರು ಮತ್ತು ಸಿಬ್ಬಂದಿಗೆ ಮಾತ್ರ ದೇಗುಲದ ಒಳಗೆ ಪ್ರವೇಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ದೇಗುಲದ ಸಿಬ್ಬಂದಿ ಇಳಯರಾಜ ಅವರನ್ನು ಅರ್ಧದಲ್ಲೇ ತಡೆದರು ಎಂದು ವರದಿಯಾಗಿದೆ.
ಹೀಗಾಗಿ ಇಳಯರಾಜ ಅವರು ಪ್ರವೇಶದ್ವಾರದಿಂದಲೇ ಪ್ರಾರ್ಥನೆ ಸಲ್ಲಿಸಿದರು ಎಂದು ವರದಿಯಾಗಿದೆ.