newsics.com
ನವದೆಹಲಿ : ಚೈನ್ ಮತ್ತು ಬೆಲ್ಟ್ ಹೊಂದಿರುವ ಒಳಉಡುಪಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಮೆಟಲ್ ಮ್ಯೂಸಿಕ್’ ಕಂಪನಿ ‘ಪಿಟ್ ಡೈಪರ್’ ಹೆಸರಿನ ಒಳಚಡ್ಡಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸಂಗೀತ ಕೇಳುತ್ತಲೇ ಬಾತ್ರೂಮ್‌ಗೆ ಹೋಗಿ ಬರಬಹುದು. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಈ ಒಳಉಡುಪಿನ ಬೆಲೆ 59 ಪೌಂಡ್ (ಅಂದಾಜು 6,336.18 ರೂಪಾಯಿ).
ಮ್ಯೂಸಿಕ್ ಅಭಿಮಾನಿಗಳಿಗಾಗಿಯೇ ಸಿದ್ಧಪಡಿಸಲಾಗಿರುವ ಈ ಪಿಟ್ ಡೈಪರ್ ಒಳಉಡುಪು, ತನ್ನ ವಿಶೇಷ ಡಿಸೈನ್‌ನಿಂದಾಗಿ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಇದು ಓಪನ್ ಕ್ವಿಲ್ಟೆಡ್ ಲೆದರ್‌ನಿಂದ ತಯಾರಿಸಲ್ಪಟ್ಟಿದ್ದು, ಚೈನ್ ಮತ್ತು ಬೆಲ್ಟ್ ಒಳಗೊಂಡಿದೆ. ಹಾಗೆ ಮುಂಭಾಗದಲ್ಲಿ ಘರ್ಜಿಸುತ್ತಿರುವ ಸಿಂಹದ ಫೋಟೋ ಕಾಣಬಹುದು. ಇದು ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ರೀತಿಯ ಸೋರಿಕೆ ಮತ್ತು ವಾಸನೆಯೂ ಬರಲ್ಲ. ಧರಿಸುವ ಗ್ರಾಹಕರಿಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ. ಹಾಗಾಗಿ ಇದನ್ನು ಅಡಲ್ಟ್ ಡೈಪರ್ ಎಂದು ಕರೆಯಲಾಗುತ್ತದೆ. ತನ್ನ ವಿಶೇಷ ಡಿಸೈನ್‌ನಿಂದಾಗಿ ಸೋಶಿಯಲ್ ಮೀಡಿಯಾ ಮೂಲಕ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಟ್ರೆಂಡ್‌ನಲ್ಲಿರೋ ಒಳಉಡುಪು ಇದಾಗಿದ್ದು, ಜನರು ಖರೀದಿಸಲು ಉತ್ಸುಕರಾಗಿರೋದಂತು ಸತ್ಯ.
ಮೆಟಲ್ ಮ್ಯೂಸಿಕ್ ಮತ್ತು ಲಿಕ್ವಿಡ್ ಡೆತ್ ಮತ್ತು ಡಿಪೆಂಡ್ ಎಂಬ ಎರಡು ಬ್ರ್ಯಾಂಡ್‌ಗಳು ಜೊತೆಯಾಗಿ ಪಿಟ್ ಡೈಪರ್‌ನ್ನು ಡಿಸೈನ್ ಮಾಡಲಾಗಿದೆ. ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭದಲ್ಲಿ ಅಥವಾ ಸಿನಿಮಾ ನೋಡುವಾಗ ಮಧ್ಯದಲ್ಲಿಯೇ ಎದ್ದು ಹೋಗೋದನ್ನು ಈ ಪಿಟ್ ಡೈಪರ್ ತಡೆಯುತ್ತದೆ. ಹಾಗಾಗಿಯೇ ಈ ಪಿಟ್ ಡೈಪರ್‌ಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.