Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Nithin Gadkari Report ಬೆಂಗಳೂರಿಗರ ಆತಂಕ ಹೆಚ್ಚಿಸಿದ ಗಡ್ಕರಿ ವರದಿ! ಕೇಂದ್ರ ಸಚಿವರ ವರದಿಯಲ್ಲಿ ಅಂಥದ್ದೇನಿದೆ?
ಕರ್ನಾಟಕದೇಶಪ್ರಮುಖ

Nithin Gadkari Report ಬೆಂಗಳೂರಿಗರ ಆತಂಕ ಹೆಚ್ಚಿಸಿದ ಗಡ್ಕರಿ ವರದಿ! ಕೇಂದ್ರ ಸಚಿವರ ವರದಿಯಲ್ಲಿ ಅಂಥದ್ದೇನಿದೆ?

Share
2 Min Read
SHARE

newsics.com

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಂಸತ್ತಿನಲ್ಲಿ ತೆರೆದಿಟ್ಟ ವರದಿಯೊಂದು ಬೆಂಗಳೂರಿಗರ ಆತಂಕ ಹೆಚ್ಚಿಸಿದೆ.

ರಸ್ತೆ ಅಪಘಾತ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು ನಂಬರ್ 2 ಎಂಬ ನಿತಿನ್ ಗಡ್ಕರಿ ಅವರ ಅಂಕಿ ಅಂಶ ಬೆಂಗಳೂರಿಗರು ಗಾಬರಿಯಾಗುವಂತೆ ಮಾಡಿದೆ.

ಪ್ರಮುಖ ನಗರಗಳ ಪೈಕಿ ಗರಿಷ್ಠ ಅಪಘಾತವಾಗುತ್ತಿರುವ ನಗರಗಳ ಪಟ್ಟಿಯನ್ನು ನಿತಿನ್ ಗಡ್ಕರಿ ನೀಡಿದ್ದಾರೆ. ಇದರಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ.

ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳು ಜನರ ಆತಂಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ನಿತಿನ್ ಗಡ್ಕರಿ ದೇಶದ ಅಪಘಾತ ಪ್ರಕರಣಗಳ ಚಿತ್ರಣ ಮುಂದಿಟ್ಟಿದ್ದಾರೆ. ಇದು ಬೆಂಗಳೂರಿಗರ ಆತಂಕ ಹೆಚ್ಚಿಸಿದೆ. ಕಾರಣ ಗರಿಷ್ಠ ಅಪಘಾತ ಪ್ರಕರಣ ಹಾಗೂ ಮೃತಪಟ್ಟವರ ಸಂಖ್ಯೆಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು 2ನೇ ಸ್ಥಾನದಲ್ಲಿದೆ. ಜೈಪುರ ಮೂರನೇ ಸ್ಥಾನದಲ್ಲಿದೆ.

ಗರಿಷ್ಠ ಅಪಘಾತ ಹಾಗೂ ಸಾವು
ದೆಹಲಿ: 1,457 ಸಾವು
ಬೆಂಗಳೂರು: 915 ಸಾವು
ಜೈಪುರ: 850 ಸಾವು

ಸದನದಲ್ಲಿ ಅಪಘಾತ ಕುರಿತು ಮಾಹಿತಿ ನೀಡಿದ ನಿತಿನ್ ಗಡ್ಕರಿ, ಭಾರತದಲ್ಲಿ ಪ್ರತಿ ವರ್ಷ ಸುಮಾರು 1,78,000 ಮಂದಿ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ಈ ಪೈಕಿ ಶೇಕಡಾ 60 ರಷ್ಟು ಮಂದಿ 18 ರಿಂದ 34 ವಯಸ್ಸಿನವರು ಎಂದು ಗಡ್ಕರಿ ಹೇಳಿದ್ದಾರೆ.

2024ರ ವೇಳೆ ಅಪಘಾತ ಪ್ರಮಾಣವನ್ನು ಶೇಕಡಾ 50 ರಷ್ಟು ಕಡಿಮೆ ಮಾಡುವ ಗುರಿ ಇಟ್ಟುಕೊಂಡಿದ್ದೆವು. ಆದರೆ ಈ ಪ್ರಮಾಣ ಕಡಿಮೆಯಾಗುವುದು ಹಾಗಿರಲಿ ಹೆಚ್ಚಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಇದೇ ವಿಚಾರವಾಗಿ ಅಂತಾರಾಷ್ಟ್ರೀಯ ರಸ್ತೆ ಸುರಕ್ಷತಾ ಸಮ್ಮೇಳನ, ಸಭೆಯಲ್ಲಿ ಮುಖ ತೋರಿಸಲು ನನಗೆ ನಾಚಿಕೆಯಾಗುತ್ತದೆ. ಹೀಗಾಗಿ ಇಂತಹ ಸಮ್ಮೇಳನಗಳಲ್ಲಿ ನಾನು ಮುಖ ಕಾಣದಂತೆ ಮಾಡುತ್ತೇನೆ ಎಂದು ನಿತಿನ್ ಗಡ್ಕರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಗರಿಷ್ಠ ಅಪಘಾತ ಮತ್ತು ಸಾವು
ಉತ್ತರ ಪ್ರದೇಶ: 23,652 ಸಾವು
ತಮಿಳುನಾಡು: 18,347 ಸಾವು
ಮಹಾರಾಷ್ಟ್ರ: 15,366 ಸಾವು
ಮಧ್ಯಪ್ರದೇಶ: 13,798 ಸಾವು

ಗರಿಷ್ಠ ಅಪಘಾತ ಹಾಗೂ ಮೃತ ಸಂಖ್ಯೆಗಳ ರಾಜ್ಯದ ಪಟ್ಟಿಯನ್ನೂ ನಿತಿನ್ ಗಡ್ಕರಿ ನೀಡಿದ್ದಾರೆ. ಈ ಪೈಕಿ ಉತ್ತರ ಪ್ರದೇಶದಲ್ಲಿ ಅಪಘಾತದಿಂದ 23,652 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗರಿಷ್ಠ ಸಾವು ಉತ್ತರ ಪ್ರದೇಶದಲ್ಲಿ ಆಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

Sleep Divorce ದೇಶದಲ್ಲೂ ಹೆಚ್ಚುತ್ತಿದೆ ನಿದ್ರಾ ವಿಚ್ಛೇದನ! ಯಾಕೆ ಹೀಗೆ? ಗಂಡ- ಹೆಂಡತಿ ಸಂಬಂಧಕ್ಕೆ ಧಕ್ಕೆಯಾಗ್ತಿದ್ಯಾ?

Relationship :ನಿಮ್ಮ ಹೆಂಡತಿಯ ಮನಸ್ಸನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ನಿಮಗೆ ತಿಳಿದಿದೆಯೇ?

Dawood Ibrahim: ದಾವೂದ್ ಇಬ್ರಾಹಿಂನ ಮಾದಕ ವಸ್ತು ಫ್ಯಾಕ್ಟರಿ ಮ್ಯಾನೇಜರ್ ದಾನಿಶ್ ಚಿಕ್ನಾ ಅರೆಸ್ಟ್‌

TAGGED:Gadkari's report increased the anxiety of Bangaloreans! What is there in the Union Minister's report?
Share This Article
Facebook Twitter Copy Link Print
Previous Article Tabla maestro Zakir Hussain ಸಂಬಂಧಿಗಳ ಹೇಳಿಕೆ: ಗೊಂದಲದ ಗೂಡಾಯ್ತು ತಬಲಾ‌ ಮಾಂತ್ರಿಕ ಝಾಕಿರ್ ಹುಸೇನ್ ನಿಧನ ವಾರ್ತೆ
Next Article Marriage dispute ನಿಶ್ಚಿತಾರ್ಥ ದಿನವೇ ಮೊದಲ ರಾತ್ರಿ ಸುಖ! ಬಳಿಕ ಮದುವೆಗೆ ನಿರಾಕರಣೆ, ಯುವತಿ ಆತ್ಮಹ*ತ್ಯೆ, ಯುವಕನ ಬಂಧನ

Popular Posts

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

You Might Also Like

ಕರ್ನಾಟಕಪ್ರಮುಖ

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read
ಕರ್ನಾಟಕದೇಶಪ್ರಮುಖ

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read
ದೇಶಪ್ರಮುಖ

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಕರ್ನಾಟಕಪ್ರಮುಖ

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?