Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ನೆನಪು > SM Krishna memory ಅನಗತ್ಯ ಚಿಕಿತ್ಸೆ ಮೂಲಕ ನನ್ನ ಆಯಸ್ಸು ಹೆಚ್ಚಿಸಬೇಡಿ ಎಂದಿದ್ದ ಎಸ್.ಎಂ.‌ ಕೃಷ್ಣ!
ಕರ್ನಾಟಕದೇಶನೆನಪುಪ್ರಮುಖ

SM Krishna memory ಅನಗತ್ಯ ಚಿಕಿತ್ಸೆ ಮೂಲಕ ನನ್ನ ಆಯಸ್ಸು ಹೆಚ್ಚಿಸಬೇಡಿ ಎಂದಿದ್ದ ಎಸ್.ಎಂ.‌ ಕೃಷ್ಣ!

Share
2 Min Read
SHARE

newsics.com

ದೇಶ ಕಂಡ ಶ್ರೇಷ್ಠ ರಾಜಕಾರಣಿಯಾಗಿದ್ದ ಎಸ್.ಎಂ.‌ ಕೃಷ್ಣ ಅವರ ರಾಜಕೀಯ ಜೀವನ ಹಾಗೂ ವೈಯಕ್ತಿಕ ಬದುಕು ಒಂದು ಹೊಸ ಪರಂಪರೆಯನ್ನೇ ಸೃಷ್ಟಿಸಿದೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ‌ ಮಾತು.

ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ತಮ್ನನ್ನು ಉಳಿಸಿಕೊಳ್ಳುವುದಕ್ಕಾಗಿ ಅನಪೇಕ್ಷಿತ ಔಷಧಗಳ ಪ್ರಯೋಗ ಮಾಡಬೇಡಿ ಎಂದು ಕುಟುಂಬ ಸದಸ್ಯರಿಗೆ ಮನವಿ ಮಾಡಿದ್ದನ್ನು ಕೃಷ್ಣ ಆಪ್ತರು ಸ್ಮರಿಸಿದ್ದಾರೆ.

‘ಆಧುನಿಕ ಕೆಂಪೇಗೌಡ’ ಎಂದೇ ಖ್ಯಾತಿ ಪಡೆದಿದ್ದ ಎಸ್.ಎಂ.ಕೃಷ್ಣ ಅವರು ಚಿಂತನಶೀಲ ನಾಯಕರಾಗಿದ್ದರು ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.

ತಮ್ಮ ಪತ್ನಿ ಪ್ರೇಮಾ ಮತ್ತು ಕುಟುಂಬ ಸದಸ್ಯರ ಜತೆ, ತಮ್ಮನ್ನು ಜೀವಂತವಾಗಿಡಲು ನೀಡುವ ನೋವು ಭರಿತ ವೈದ್ಯಕೀಯ ಉಪಚಾರ ಬೇಕಾಗಿಲ್ಲ ಎಂಬುದನ್ನು ನೇರವಾಗಿಯೇ ಹೇಳಿದ್ದರು. ಸದಾ ಉಲ್ಲಾಸಭರಿತ ಮತ್ತು ಆಶಾವಾದಿಯಾಗಿದ್ದ ಕೃಷ್ಣ, ತಮ್ಮ ಅಂತಿಮ ದಿನಗಳು ಶಾಂತಿಯುತ ಮತ್ತು ಸ್ವಾಭಾವಿಕವಾಗಿರಬೇಕು ಎಂದು ಬಯಸಿದ್ದರು. ತಮ್ಮ ಆಯಸ್ಸು ಹೆಚ್ಚಿಸಲು ಆಸ್ಪತ್ರೆಯಲ್ಲೇ ಉಳಿಯುವಂತೆ ಮಾಡಬಾರದು ಎಂದು ಅವರು ಬಯಸಿದ್ದರು.

ಕಷ್ಟದ ಸಮಯದಲ್ಲಿಯೂ, ಅವರು ತಮ್ಮ ಬುದ್ಧಿವಂತಿಕೆ ಮತ್ತು ಸ್ಪಷ್ಟತೆ ತೋರಿದ್ದರು. ಕಾಲನ ಕರೆಗೆ ವ್ಯತಿರಿಕ್ತವಾಗಿ ಜೀವನವನ್ನು ಅಸ್ವಾಭಾವಿಕವಾಗಿ ಮುಂದುವರಿಸಲು ಒತ್ತಾಯಿಸದೇ, ಸಮಯ ಬಂದಾಗ ತಮ್ಮನ್ನು ಕಳುಹಿಸಿಕೊಡುವಂತೆ ತಮ್ಮ ಪ್ರೀತಿಪಾತ್ರರಿಗೆ ಮನವಿ ಮಾಡಿದ್ದರು. ಅವರ ಮನವಿಯು ತಮ್ಮೆಲ್ಲರ ಹೃದಯವನ್ನು ಸ್ಪರ್ಶಿಸಿದೆ ಎಂದು ಅವರ ಆಪ್ತರು ಹೇಳುತ್ತಾರೆ.

ಈ ವರ್ಷದ ಏಪ್ರಿಲ್‌ನಿಂದ ಎಸ್.ಎಂ.ಕೃಷ್ಣ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರಿಗೆ ಬಾಹ್ಯವಾಗಿ ಆಮ್ಲಜನಕ ನೀಡಬೇಕಾಯಿತು. ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಏಪ್ರಿಲ್ 29 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಹಲವಾರು ತಿಂಗಳುಗಳನ್ನು ಕಳೆದ ನಂತರ ಅವರನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು. ದುರದೃಷ್ಟವಶಾತ್, ಅವರ ಆರೋಗ್ಯವು ಮತ್ತೆ ಕೈಕೊಟ್ಟಿತು. ಅಕ್ಟೋಬರ್‌ನಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು.

ನಿಜ ಜೀವನದ ನಾಯಕನಾದ ಕೃಷ್ಣ ಅವರ ಮಾತುಗಳು, ಘನತೆ ಮತ್ತು ಶಾಂತಿಯಿಂದ ಬದುಕುವ ಮತ್ತು ಇಹಲೋಕ ತೊರೆಯುವ ಮಹತ್ವವನ್ನು ನಮಗೆಲ್ಲರಿಗೂ ಕಲಿಸುತ್ತದೆ. ಕೃಷ್ಣ ಅವರು ಮಾಡಿರುವ ವಿನಂತಿಯು ಘನತೆಯಿಂದ ಬದುಕುವ ಮತ್ತು ಸಾವಿನ ಮೌಲ್ಯವನ್ನು ಹೆಚ್ಚಿಸುವ ಮಾರ್ಗದರ್ಶಿಯಾಗಿದೆ ಎಂದು ಅವರ ಆಪ್ತರು ಹೇಳುತ್ತಾರೆ.

ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ: ಪಂಚಭೂತಗಳಲ್ಲಿ ಎಸ್.ಎಂ. ಕೃಷ್ಣ ಲೀನ

SM Krishna,‌ SM ಕೃಷ್ಣಗೆ ‘ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ

TAGGED:SM Krishna who said do not increase my age through unnecessary treatment!
Share This Article
Facebook Twitter Copy Link Print
Previous Article PDO Exam ಮತ್ತೊಂದು ಎಡವಟ್ಟು ಮಾಡಿದ KPSC: PDO ನೇಮಕಾತಿಯಲ್ಲಿ ಅಕ್ರಮ
Next Article Panchamasali‌ Reservation ಪಂಚಮಸಾಲಿ ಮೀಸಲಾತಿ ಹೋರಾಟ; ಸಂಕಷ್ಟದಲ್ಲಿ ಸಿಎಂ ಸಿದ್ದರಾಮಯ್ಯ

Popular Posts

Tattoo HIV Case ಟ್ಯಾಟೂ ಪ್ರೇಮಿಗಳೇ ಎಚ್ಚರ..! ಹಚ್ಚೆ ಹಾಕಿಸಿಕೊಂಡ ಮಹಿಳೆಗೆ ತಗುಲಿದ ಎಚ್‌ಐವಿ ಸೋಂಕು

2 Min Read

Wall Fungus ಮಳೆಗಾಲದಲ್ಲಿ ಗೋಡೆಗಳ ಮೇಲೆ ಬೂಷ್ಟು ಸಮಸ್ಯೆಯೇ? ದುಬಾರಿ ಕೆಮಿಕಲ್ ಬೇಡ, ಮನೆಯಲ್ಲೇ ಇದೆ ಸುಲಭ ಪರಿಹಾರ

2 Min Read

Pregnancy Skincare Guide ಗರ್ಭಿಣಿಯರೇ ಎಚ್ಚರ..! ನೀವು ಬಳಸುವ ಮೇಕಪ್ ಪ್ರಾಡಕ್ಟ್ ಮಗುವಿಗೆ ಸೇಫ್ ಅಲ್ವಾ? ತಪ್ಪದೇ ಓದಿ ಈ ಸ್ಟೋರಿ

2 Min Read

Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!

3 Min Read

You Might Also Like

ದೇಶಪ್ರಮುಖ

Techie mysterious death ಬೆತ್ತಲೆಯಾಗಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಹೊತ್ತೊಯ್ದ ಯುವತಿ ನಿಗೂಢ ಸಾವು!

2 Min Read
ದೇಶಪ್ರಮುಖ

Today Gold Rate | ಚಿನ್ನದ ಬೆಲೆ ಮತ್ತೆ ಏರಿಕೆ

2 Min Read
ದೇಶಪ್ರಮುಖವಿದೇಶ

P V Sindhu Record ಜಪಾನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಬರೆದ ಪಿ.ವಿ. ಸಿಂಧು

3 Min Read
ಕರ್ನಾಟಕಪ್ರಮುಖ

Crime news ಆಸ್ತಿ ಕೊಡದ ತಂದೆಯನ್ನು‌ ಕೊಂ*ದು ತಾನೂ ಜೀವ ಕಳೆದುಕೊಂಡ ಮಗ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?