newsics.com
4 ವಿದ್ಯಾರ್ಥಿಗಳು ಲಕ್ಕಿ ಭಾಸ್ಕರ್ ಸಿನಿಮಾ ನೋಡಿ ನಾವು ಹೀರೋ ಥರಾನೇ ದುಡ್ಡು ಮಾಡೋಕೆ ಹೋಗ್ತೀವಿ ಅಂತ ತಾವಿದ್ದ ಹಾಸ್ಟೆಲ್ ಗೇಟ್ ಹಾರಿ ಎಸ್ಕೇಪ್ ಆಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಸೇಂಟ್ ಆನ್ಸ್ ಹೈಸ್ಕೂಲ್ನಲ್ಲಿ ನಡೆದಿದೆ. ಸದ್ಯ ವಿದ್ಯಾರ್ಥಿಗಳು ಗೇಟ್ ಹಾರಿ ಹೋಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಹೌದು, ಒಂಬತ್ತನೇ ತರಗತಿ ಓದುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ದುಲ್ಕರ್ ಸಲ್ಮಾನ್ ಅಭಿನಯದ ಲಕ್ಕಿ ಭಾಸ್ಕರ್ ಸಿನಿಮಾ ನೋಡಿ ಹೀರೋ ಥರಾನೇ ದುಡ್ಡು ಮಾಡ್ಬೇಕು ಅನ್ನೋ ಆಸೆ ಹುಟ್ಟಿದೆ. ಅದರಂತೆ ನಾಲ್ಕು ಜನ ವಿದ್ಯಾರ್ಥಿಗಳು ಇಲ್ಲೇ ಹೀಗೆ ಇದ್ರೆ ಆಗಲ್ಲ ಅಂತ ಮಾತನಾಡಿಕೊಂಡು ಹಾಸ್ಟೆಲ್ ಗೇಟ್ ಹಾರಿ ಹೋಗಿದ್ದಾರೆ.
ಮಹಾರಾಣಿ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹಾಸ್ಟೆಲ್ನಲ್ಲಿದ್ದ ಬೋಡಪತಿ ಚರಣ್ ತೇಜ, ಗುಡಾಲ ರಘು, ನಕ್ಕಲ ಕಿರಾ ಕುಮಾರ್ ಮತ್ತು ಕಾರ್ತಿಕ್ ಎಂಬ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಇನ್ನು ಹಾಸ್ಟೆಲ್ನ ಸಿಸಿಟಿವಿ ಫೂಟೇಜ್ನಲ್ಲಿ ರೆಕಾರ್ಡ್ ಆಗಿದೆ.
ಇನ್ನು ಈ ವಿದ್ಯಾರ್ಥಿಗಳು ಎಸ್ಕೇಪ್ ಆಗೋ ಮುಂಚೆ ತಮ್ಮ ಸ್ನೇಹಿತರಿಗೆ ನಾವು ಕೂಡ ಲಕ್ಕಿ ಭಾಸ್ಕರ್ ಹೀರೋನಂತೆ ಕಾರು, ಮನೆಗಳನ್ನು ಖರೀದಿಸೋಕೆ ಸಾಕಾಗುವಷ್ಟು ಹಣ ಸಂಪಾದಿಸಿಕೊಂಡು ಬರುತ್ತೇವೆ ಅಂತ ಹೇಳಿದ್ದಾರಂತೆ.
ವಿದ್ಯಾರ್ಥಿಗಳು ಮನೆಗೆ ಹಿಂತಿರುಗಿಲ್ಲ ಎಂದು ಹಾಸ್ಟೆಲ್ ಆಡಳಿತ ಮಂಡಳಿ ಖಚಿತಪಡಿಸಿದಾಗ ಬಾಲಕರು ನಾಪತ್ತೆಯಾಗಿರುವುದು ಆತಂಕ ಮೂಡಿಸಿದ್ದು, ಅವರ ಪೋಷಕರು ನಾಪತ್ತೆಯಾಗಿರುವವರ ಕುರಿತು ಎಂಆರ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
https://x.com/Jay_Apoorva18/status/1866827354057904607?ref_src=twsrc%5Etfw%7Ctwcamp%5Etweetembed%7Ctwterm%5E1866827354057904607%7Ctwgr%5Eb7d2d2a92c94292cdaaab32d4aea074c9b77fb21%7Ctwcon%5Es1_c10&ref_url=https%3A%2F%2Fapi-news.dailyhunt.in%2F
ನಾಪತ್ತೆಯಾಗಿರುವ ವಿದ್ಯಾರ್ಥಿಗಳ ಪತ್ತೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸುತ್ತಿದ್ದು, ಅವರ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು.