newsics.com
ಮಹಾರಾಷ್ಟ್ರ : ಆಕಾಶದಿಂದ ಬಲೂನ್ ತರಹದ ವಸ್ತುವೊಂದು ರೈತರೊಬ್ಬರ ಹೊಲಕ್ಕೆ ಬಂದು ಬಿದ್ದಿದೆ. ಕೊರಿಯನ್ ಭಾಷೆಯ ಬರಹಗಳಿದ್ದ ಈ ನಿಗೂಢ ಸಾಧನವನ್ನು ನೋಡಲು ಜನ ದೌಡಾಯಿಸಿದ್ದು, ಈ ಕುರಿತ ಸುದ್ದಿಯೊಂದು ಭಾರೀ ವೈರಲ್ ಆಗುತ್ತಿದೆ.
ಮಹಾರಾಷ್ಟ್ರದ ಚಿಖಲಿ ತಾಲೂಕಿನ ಅಂಚರವಾಡಿಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಆಕಾಶದಿಂದ ಬಲೂನ್ ರೀತಿಯ ನಿಗೂಢ ವಸ್ತು ಬಿದ್ದಿದ್ದನ್ನು ಕಂಡು ಜನ ಭಯಬೀತರಾಗಿದ್ದಾರೆ. ಡಿಸೆಂಬರ್ 2 ಸೋಮವಾರದಂದು ಮೋಡ ಕವಿದ ವಾತಾವರಣದ ಮಧ್ಯೆ ಅಂಚರವಾಡಿಯ ಸಂಜಯ್ ಸೀತಾರಾಮ ಪರಿಹಾರ್ ಎಂಬವರ ಹೊಲಕ್ಕೆ ಬಲೂನ್ ತರಹದ ನಿಗೂಢವಾದ ವಸ್ತು ಬಿದ್ದಿದೆ. ಸಂಜಯ್ ಪರಿಹಾರ್ ಅವರ ಮಗ ಅವಿನಾಶ್ ಮತ್ತು ಸೋದರ ಸಂಬಂಧಿ ವೈಭವ್ ಜೊತೆ ಎಂದಿನಂತೆ ಹೊಲಕ್ಕೆ ಬಂದ ವೇಳೆ ಈ ನಿಗೂಢ ವಸ್ತುವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಕೊರಿಯನ್ ಭಾಷೆಯ ಅಕ್ಷರಗಳಿದ್ದಂತಹ ಸಾಧನವನ್ನು ದೊಡ್ಡ ಬಲೂನ್‌ಗೆ ಜೋಡಿಸಿರುವುದನ್ನು ಗಮನಿಸುತ್ತಾರೆ. ತಕ್ಷಣ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದು, ವಿಷಯ ಗೊತ್ತಾಗುತ್ತಿದ್ದಂತೆ ಈ ನಿಗೂಢ ವಸ್ತುವನ್ನು ಕಣ್ತುಂಬಿಕೊಳ್ಳಲು ಗ್ರಾಮಸ್ಥರು ಹೊಲದ ಬಲಿ ದೌಡಾಯಿಸಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಕಂದಾಯ ಇಲಾಖೆ ತನಿಖೆ ನಡೆಸಿ ಸಾಧನವನ್ನು ವಶಕ್ಕೆ ಪಡೆದಿದ್ದಾರೆ.