newsics.com
ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳ ಹಿಂದೆ ವೈರಲ್ ಆಗಿರುವ ಬನಾರಸಿ ಬಿಕಿನಿ ಧರಿಸಿದ ವಧು ಯಾರು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿದೆ.
ವೈರಲ್ ಆಗಿರುವ ಫೋಟೋದಲ್ಲಿ ಮದುಮಗ ಕ್ರೀಮ್ ಕಲರ್ ಶೇರ್ವಾನಿ ಧರಿಸಿಕೊಂಡು ಹಾರ ಹಾಕಿಸಿಕೊಂಡರೆ, ಆತನಿಗೆ ಹಾರ ಹಾಕಿದ ಮದುಮಗಳು ತಲೆ ಮೇಲೆ ಚೂಡಿದಾರ್ ವೇಲ್, ಮುಂಗುಟಿ, ಕೊರಳಲ್ಲಿ ಭಾರವಾದ ನೆಕ್ಲೇಸ್, ಕಿವಿಯಲ್ಲಿ ಜುಮುಕಿ, ಕೈತುಂಬಾ ಮೆಹಂದಿ ಹಾಗೂ ಕೈಯಲ್ಲಿ ಬಳೆಗಳನ್ನು ಹಾಕಿಕೊಂಡಿದ್ದಾರೆ. ಆದರೆ, ಮುಖ್ಯವಾಗಿ ಮೈ ಮುಚ್ಚುವಂತೆ ಬಟ್ಟೆಯನ್ನೇ ಧರಿಸದೇ ಹಳದಿ ಬಿಕಿನಿ ಹಾಕೊಂಡಿದ್ದಾಳೆ. ಇದು ಕೂಡ ಸೀರೆ, ಲೆಹೆಂಗಾ ಜೊತೆ ಮ್ಯಾಚ್ ಆಗುವಂತೆ ಬನಾರಸಿ ಸ್ಟೈಲ್ ನಲ್ಲಿದೆ. ಜನ ಈ ರೀತಿಯ ವೆಡ್ಡಿಂಗ್ ಡ್ರೆಸ್ ನೋಡಿ ಶಾಕ್ ಆಗಿದ್ದಾರೆ.
ಫೋಟೋದ ಹಿಂದಿನ ಸತ್ಯ ತಿಳಿದುಕೊಳ್ಳಲು ಸೈಟೊ, ಇನ್‌ಸ್ಟಾಗ್ರಾಮ್, ಟ್ವಿಟರ್ ಸೇರಿದಂತೆ ಹಲವು ಟೂಲ್ಸ್ ಬಳಸಲಾಗಿದೆ.ಆದರೆ, ಯಾವುದೇ ಮದುಮಗಳು ಬಿಕಿನಿಯಲ್ಲಿ ವರಮಾಲೆ ಹಾಕಿದ ಘಟನೆ ನಡೆದಿಲ್ಲ. ಈ ವೈರಲ್ ಫೋಟೋ ಎಐ ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದ ತಯಾರಿಸಲ್ಪಟ್ಟಿದೆ ಎಂಬುದು ತಿಳಿದುಬಂದಿದೆ. ಇತ್ತೀಚೆಗೆ ಎಐನಿಂದ ಕಣ್ಣಿಗೆ ನಂಬಲಾರದಂತಹ ಅನೇಕ ಸೃಷ್ಟಿಗಳನ್ನು ಮಾಡುತ್ತಿದ್ದು, ಇದನ್ನು ನೇರವಾಗಿ ನಂಬದೇ ಪರಿಶೀಲನೆ ಮಾಡುವುದು ಒಳಿತು..