newsics.com
ದೆಹಲಿ : ಮಹಾಮಾರಿ HIV ಏಡ್ಸ್ ಗೆ ಕೊನೆಗೂ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಿದ್ದಾರೆ. ಅಮೆರಿಕದ ಗಿಲಿಯಾಡ್ ಎಂಬ ಅಮೆರಿಕದ ಫಾರ್ಮಾ ಸುಟಿಕಲ್ ಕಂಪನಿ ಈ ಲಸಿಕೆ ಸಿದ್ದಪಡಿಸಿದೆ.
ವಿಜ್ಞಾನಿಗಳ ಪ್ರಕಾರ, ಲೆಂಕಾವಿರ್ ಲಸಿಕೆ ಪುರುಷರಲ್ಲಿಯೂ ಸಹ HIV ಸೋಂಕನ್ನು ಬಹುತೇಕ ತೊಡೆದುಹಾಕುತ್ತದೆ.
ಕ್ಲಿನಿಕಲ್ ಪ್ರಯೋಗದಲ್ಲಿ ಐದು ಸಾವಿರ ಜನರನ್ನು ಸೇರಿಸಲಾಯಿತು. ಈ ಅವಧಿಯಲ್ಲಿ, ಲಸಿಕೆ ತೆಗೆದುಕೊಂಡ ಯಾವುದೇ ಮಹಿಳೆಯರು ಸೋಂಕಿಗೆ ಬಲಿಯಾಗಲಿಲ್ಲ. ಈ ಲಸಿಕೆಯನ್ನು ಆರು ತಿಂಗಳ ಮಧ್ಯಂತರದಲ್ಲಿ ನೀಡಲಾಗುತ್ತದೆ.
ವರ್ಷಕ್ಕೆ ಎರಡು ಬಾರಿ ‘ಲೆನಾಕಾವಿರ್’ ಎಂಬ ಹೊಸ ರೋಗನಿರೋಧಕ ಔಷಧದೊಂದಿಗೆ ಲಸಿಕೆಯನ್ನು ಪಡೆಯುವುದು HIV ಸೋಂಕನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಕ್ಲಿನಿಕಲ್ ಪ್ರಯೋಗದಲ್ಲಿ ವಿಜ್ಞಾನಿಗಳು ಈ ಹೇಳಿಕೆ ನೀಡಿದ್ದಾರೆ.
ಡ್ಯೂಕ್ ವಿಶ್ವವಿದ್ಯಾನಿಲಯದ ಗ್ಲೋಬಲ್ ಹೆಲ್ತ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ.ಕ್ರಿಸ್ ಬೇರರ್, ಆಫ್ರಿಕಾ ಮತ್ತು ಏಷ್ಯಾದಂತಹ ದೇಶಗಳಲ್ಲಿ ಈಗಾಗಲೇ ಲೆನ್‌ಕಾವಿರ್ ಬಳಸಲಾಗುತ್ತಿದೆ. ಇದನ್ನು US, ಕೆನಡಾ, ಯುರೋಪ್ ಮತ್ತು ಇತರೆಡೆಗಳಲ್ಲಿ HIV ಸೋಂಕಿನ ಚಿಕಿತ್ಸೆಯಾಗಿ ಸನ್ಲೆಂಕಾ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.