newsics.com
ನವದೆಹಲಿ: ಮದುವೆ ಗಂಡು ಮಾತ್ರ ಪದೇ ಪದೇ ವಾಶ್ರೂಂಗೆ ಎದ್ದು ಹೋಗ್ತಿದ್ದ ಇದ್ದು ದಿಢೀರನೇ ಮ್ಯಾರೇಜ್ ಕ್ಯಾನ್ಸಲ್ ಆಗಿ ರಂಪಾಟವೇ ನಡೆದಿದೆ.
ದೆಹಲಿಯ ಸಹಿದಾಬಾದ್ನಲ್ಲಿ ಗಾಂಧಿನಗರ ನಿವಾಸಿ ಅವಿನಾಶ್ ಎಂಬ ಯುವಕನಿಗೆ ವಿವಾಹ ನಿಗದಿಯಾಗಿತ್ತು. ಮದುವೆ ಮಂಟಪದಲ್ಲಿ ಅವಿನಾಶ್ ಪದೇ ಪದೇ ಎದ್ದು ವಾಶ್‌ರೂಮ್‌ಗೆ ಅಂತ ಹೇಳಿ ಎದ್ದು ಹೋಗುತ್ತಿದ್ದ. ವಾಶ್ರೂಮ್ ಹೋಗಿ ಬಂದಾಗಲೆಲ್ಲ ವಿಚಿತ್ರವಾಗಿ ವರ್ತಿಸುತ್ತಿದ್ದ.
ವರನ ಈ ವಿಚಿತ್ರ ವರ್ತನೆಗೆ ಅನುಮಾನಗೊಂಡ ಹೆಣ್ಣಿನ ಕಡೆಯವರು ಅವನನ್ನೇ ಹಿಂಬಾಲಿಸಿದ್ದಾರೆ. ಅಲ್ಲಿ ನಡೆಯುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ವಾಶ್‌ರೂಮ್‌ಗೆ ಅಂತ ಸುಳ್ಳು ಹೇಳಿ ಹೋಗುತ್ತಿದ್ದ ಅವಿನಾಶ್ ಸ್ನೇಹಿತರೊಂದಿಗೆ ಸೇರಿ ಮಾದಕ ದ್ರವ್ಯ ಸೇವಿಸುತ್ತಿದ್ದ. ಮದುಮಗನ ಡ್ರಗ್ಸ್ ಸೇವನೆ ಬಗ್ಗೆ ತಿಳಿದ ಮದುವೆ ಮನೆಯಲ್ಲಿದ್ದವರು ಫುಲ್ ಶಾಕ್ ಆಗಿದ್ದಾರೆ. ವಧು ಮದುವೆ ಮಂಟಪದಲ್ಲಿ ಅವಿನಾಶ್ನೊಂದಿಗೆ ಮದುವೆಯಾಗಲು ನಿರಾಕರಿಸಿದ್ದಾರೆ.