newsics.com
ಲಕ್ನೋ: ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಪಿವಿ ಸಿಂಧು ಚೀನಾದ ಆಟಗಾರ್ತಿ ಲುವೊ ಯು ವು ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಸೈಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಇಂದು ನಡೆದ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಲುವೊ ಯು ವು ಅವರನ್ನು 21-14 21-16 ನೇರ ಸೆಟ್ಗಳಿಂದ ಮಣಿಸಿದ ಸಿಂಧು ಮೂರನೇ ಬಾರಿಗೆ ಸೈಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇದಕ್ಕೂ ಮೊದಲು ಸಿಂಧು, 2017 ಮತ್ತು 2022 ರಲ್ಲಿ ಈ ಟೂರ್ನಮೆಂಟ್ ಗೆದ್ದಿದ್ದರು.
ಚೀನಾದ ಆಟಗಾರ್ತಿ ಲುವೊ ಯು ವು ಮೇಲೆ ಒತ್ತಡ ಹೇರಿದ ಪಿವಿ ಸಿಂಧು 21-14 ರಿಂದ ಮೊದಲ ಸೆಟ್ ಗೆದ್ದರು. ಇದಾದ ಬಳಿಕ ಎರಡನೇ ಸೆಟ್‌ನಲ್ಲೂ ತಮ್ಮ ಅಮೋಘ ಪ್ರದರ್ಶನ ಮುಂದುವರಿಸಿದ ಸಿಂಧು 21-16ರಿಂದ ಎರಡನೇ ಸೆಟ್ ಗೆದ್ದು ಪಂದ್ಯವನ್ನು ಗೆದ್ದುಕೊಂಡರು.