newsics.com
ಏಡ್ಸ್ ರೋಗದ ನಡುವೆಯೇ ಅಸುರಕ್ಷಿತ ಲೈಂಗಿಕತೆಯಿಂದ ಹರಡುವ ಮತ್ತೊಂದು ರೋಗ ಗೊನೊರಿಯಾ ಈಗ ಜೋರಾಗಿಯೇ ವ್ಯಾಪಿಸುತ್ತಿದೆ. ಈ ರೋಗದಿಂದ ಬಳಲುತ್ತಿರುವ ಜನರೊಂದಿಗೆ ನೀವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದಾಗ ಇದು ಹರಡುತ್ತದೆ.
ಗೊನೊರಿಯಾ ರೋಗ ಇರುವ ವ್ಯಕ್ತಿಗಳಲ್ಲಿ ಯಾವುದೇ ರೀತಿಯ ರೋಗಲಕ್ಷಣಗಳು ಕಂಡು ಬರುವುದಿಲ್ಲ. ಅವು ಕಂಡುಬಂದರೂ ಕೂಡ ಸೌಮ್ಯವಾಗಿರಬಹುದು. ಸಾಮಾನ್ಯವಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಮತ್ತು ಉರಿಯೂತ ಕಂಡುಬರುತ್ತದೆ.
ಗೊನೊರಿಯಾ ಲೈಂಗಿಕವಾಗಿ ಹರಡುವ ರೋಗವಾಗಿದೆ. ಸಾಮಾನ್ಯವಾಗಿ ಇದು ನಿಸ್ಸೇರಿಯಾ ಗೊನೊರಿಯಾ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಹಾಗಾಗಿ ಇದಕ್ಕೆ ಗೊನೊರಿಯಾ ಎಂಬ ಹೆಸರು ಬಂದಿದೆ.
ಏನಿದು ಗೊನೋರಿಯಾ?
ಲೈಂಗಿಕವಾಗಿ ಸಕ್ರಿಯವಾಗಿರುವ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಈ ಕಾಯಿಲೆಗೆ ಒಳಗಾಗಬಹುದು. ಎರಡನೆಯದಾಗಿ, ಇವರ ಜತೆಗೆ ಲೈಂಗಿಕ ಸಂಪರ್ಕ ಹೊಂದಿರುವ ಪುರುಷರು ಗೊನೊರಿಯಾಕ್ಕೆ ಹೆಚ್ಚು ಒಳಗಾಗುತ್ತಾರೆ. 2018 ರ ಆರಂಭದಲ್ಲಿ ಸೂಪರ್ ಗೊನೊರಿಯಾ ತಳಿಗಳು (Cultivars) ಅನೇಕ ದೇಶಗಳಲ್ಲಿ ಕಂಡುಬಂದವು. ಅಲ್ಲಿಂದ ಈ ಭಯಾನಕ ರೋಗ ಜನರನ್ನು ಕಾಡುತ್ತಿದೆ. ಹಾಗಾಗಿ ಈ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ.
ಈ ಬ್ಯಾಕ್ಟೀರಿಯಾವು ಮುಖ್ಯವಾಗಿ ಪುರುಷ ಜನನಾಂಗದಿಂದ ಹೊರಸೂಸುವಿಕೆ ಮತ್ತು ಯೋನಿ ದ್ರವದಲ್ಲಿ ಕಂಡುಬರುತ್ತದೆ. ಈ ರೋಗವು ಮೂತ್ರನಾಳ, ಗುದನಾಳ ಮತ್ತು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರಲ್ಲಿ, ಇದು ಗರ್ಭಾಶಯ ಅಥವಾ ಗರ್ಭಕಂಠದ ಮೇಲೂ ಪರಿಣಾಮ ಬೀರಬಹುದು.
ಪುರುಷರಲ್ಲಿ ರೋಗಲಕ್ಷಣ:
ಜನನಾಂಗದಿಂದ ಬಿಳಿ, ಹಳದಿ ಅಥವಾ ಹಸಿರು ವಿಸರ್ಜನೆ
ವೃಷಣಗಳ ನೋವು ಅಥವಾ ಊತ (ಇದು ಅಪರೂಪವಾಗಿ ಕಂಡುಬರುತ್ತದೆ)
ಮಹಿಳೆಯರಲ್ಲಿ ರೋಗಲಕ್ಷಣ:
ಋತುಚಕ್ರದ ಮಧ್ಯದಲ್ಲಿ ಯೋನಿಯಿಂದ ಅಸಹಜ ರಕ್ತಸ್ರಾವ ಉಂಟಾಗುತ್ತದೆ. ಅಲ್ಲದೆ ಯೋನಿಯಿಂದ ಅತಿಯಾದ ಸ್ರವಿಸುವಿಕೆ ಇರುತ್ತದೆ.
ಸಾಮಾನ್ಯ ರೋಗಲಕ್ಷಣ:
* ಹುಣ್ಣುಗಳು
* ರಕ್ತಸ್ರಾವ ಅಥವಾ ವಿಸರ್ಜನೆ (ಸ್ರವಿಸುವಿಕೆ)
* ಗುದ ತುರಿಕೆ
ಮುಖ್ಯ ಕಾರಣಗಳು?
ಈ ಬ್ಯಾಕ್ಟೀರಿಯಾಗಳು ಸೋಂಕಿತ ಜನರ ವೀರ್ಯದ ಮೊದಲು ಸ್ರವಿಸುವ ದ್ರವಗಳಲ್ಲಿ ಮತ್ತು ಯೋನಿ ದ್ರವಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ಇದು ಮುಖ್ಯವಾಗಿ ಅಸುರಕ್ಷಿತ ಯೋನಿ, ಲೈಂಗಿಕತೆಯ ಮೂಲಕ ಹರಡುತ್ತದೆ. ಅಲ್ಲದೆ ಆ ದ್ರವಗಳೊಂದಿಗೆ ಸಂಪರ್ಕದಲ್ಲಿರುವ ಕೈಗಳಿಂದ ಕಣ್ಣುಗಳನ್ನು ಸ್ಪರ್ಶಿಸುವುದು ಸಹ ಕಣ್ಣುಗಳ ಸೋಂಕಿಗೂ ಕಾರಣವಾಗಬಹುದು. ಇದು ಹೆರಿಗೆಯ ಸಮಯದಲ್ಲಿ ಸೋಂಕಿತ ತಾಯಿಯಿಂದ ಮಗುವಿಗೂ ಹರಡುತ್ತದೆ.
ಚಿಕಿತ್ಸಾ ವಿಧಾನಗಳು:
ಡ್ಯುಯಲ್ ಥೆರಪಿ ನಡೆಸಲಾಗುತ್ತದೆ. ಬಳಿಕ ಡೋಸ್‌ಗಳಾಗಿ ಔಷಧಗಳನ್ನು ನೀಡಲಾಗುತ್ತದೆ. ಮತ್ತೊಂದು ಡೋಸ್ ಆಗಿ ಇಂಟ್ರಾಮಸ್ಕುಲರ್ ಇಂಜೆಕ್ಷನ್ ನೀಡಲಾಗುತ್ತದೆ. ವೈದ್ಯರು ತಿಳಿಸಿದ ಚಿಕಿತ್ಸೆ ಮುಗಿಯುವವರೆಗೂ ಲೈಂಗಿಕತೆಯಿಂದ ದೂರವಿರಬೇಕಾಗುತ್ತದೆ. ಹೆಚ್ಚಿನ ಮಾಹಿತಿ ನಿಮ್ಮ ವೈದ್ಯರನ್ನು ಸಂಪರ್ಕಿಸಬಹುದು.
Relationship Tips| ದಾಂಪತ್ಯ ಜೀವನ ರೊಮ್ಯಾಂಟಿಕ್ ಆಗಿರಲು ಏನ್ ಮಾಡಬೇಕು?
Health Alert| ಕಾಫಿ, ಟೀ ಪ್ರಿಯರೇ ಎಚ್ಚರ! ICMR ಹೀಗೆ ಹೇಳ್ತಿರೋದೇಕೆ?
Health Tips | ಧೂಮಪಾನದಿಂದ ಕಣ್ಣಿಗೂ ಹಾನಿ: ಸ್ಮೋಕ್ ಝೋನ್‌ನಿಂದ ದೂರವಿರಿ, ಇಲ್ಲದಿದ್ದರೆ ನಿಮಗೂ ಅಪಾಯ