newsics.com
ಪಣಜಿ: ಒಟಿಟಿಯಲ್ಲಿ ಹೊಸ ಅಲೆ ಸೃಷ್ಟಿಯಾಗುತ್ತಿದೆ. ಸರ್ಕಾರಿ ವಾಹಿನಿ ಪ್ರಸಾರ ಭಾರತಿಯ ‘ವೇವ್ಸ್’ ಒಟಿಟಿ ಪ್ರವೇಶಿಸಿದೆ. ಈ ಮೂಲಕ ನೆಟ್ಫ್ಲಿಕ್ಸ್ಗೆ ಪೈಪೋಟಿ ನೀಡಲು ಮುಂದಾಗಿದೆ.
ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ಗುರುವಾರ ಗೋವಾದಲ್ಲಿ ನಡೆದ 55 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ವಾಹಿನಿ ಪ್ರಸಾರ ಭಾರತಿಯ OTT ಪ್ಲಾಟ್ಫಾರ್ಮ್ ‘ವೇವ್ಸ್’ ಅನ್ನು ಅನಾವರಣ ಮಾಡಿದ್ದಾರೆ.
ಇದರೊಂದಿಗೆ ಭಾರತದ ಐಕಾನಿಕ್ ಪಬ್ಲಿಕ್ ಬ್ರಾಡ್ಕಾಸ್ಟರ್ ದೂರದರ್ಶನ ಒಟಿಟಿ ವ್ಯಾಪ್ತಿಗೆ ಕಾಲಿಟ್ಟಿದೆ.
ಪಿಐಬಿ ಹೇಳಿಕೆಯ ಪ್ರಕಾರ, ಡಿಡಿಯಲ್ಲಿ ಪ್ರಸಾರವಾದ ಕ್ಲಾಸಿಕ್ ಕಂಟೆಂಟ್ಗಳು ಸಮಕಾಲೀಕ ಕಾರ್ಯಕ್ರಮಗಳ ಸಮೃದ್ಧ ಮಿಶ್ರಣವನ್ನು ಒಟಿಟಿ ಒಳಗೊಂಡಿರಲಿದೆ. ಆಧುನಿಕ ಡಿಜಿಟಲ್ ಟ್ರೆಂಡ್ಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಡಿಡಿಯೊಂದಿಗಿನ ಹಳೆಯ ನೆನಪುಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನೂ ಇದು ಹೊಂದಿದೆ.
ವೇವ್ಸ್ ಒಟಿಟಿಯಲ್ಲಿ ಡಿಡಿಯಲ್ಲಿ ಪ್ರಸಾರವಾಗಿ ದಾಖಲೆ ಬರೆದಿದ್ದ, ರಾಮಾಯಣ, ಮಹಾಭಾರತ, ಶಕ್ತಿಮಾನ್ ಹಾಗೂ ಹಮ್ ಲೋಗ್ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.
ಅದರೊಂದಿಗೆ ನ್ಯೂಸ್, ಡಾಕ್ಯುಮೆಂಟರಿಗಳು ಹಾಗೂ ಸ್ಥಳೀಯ ವಿಚಾರಗಳನ್ನು ಒಟಿಸಿ ನೀಡಲಿದೆ. ಹಿಂದಿ, ಇಂಗ್ಲಿಷ್, ಬೆಂಗಾಲಿ, ಮರಾಠಿ, ಕನ್ನಡ, ಮಲಯಾಳಂ, ತೆಲುಗು, ತಮಿಳು, ಗುಜರಾತಿ, ಪಂಜಾಬಿ, ಅಸ್ಸಾಮಿ ಮುಂತಾದ 12 ಕ್ಕೂ ಹೆಚ್ಚು ಭಾಷೆಗಳಲ್ಲಿ ಅಂತರರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಭಾರತೀಯ ಸಂಸ್ಕೃತಿಯನ್ನು ಒಳಗೊಳ್ಳುವ ಅಂತರ್ಗತ ಭಾರತದ ಕಥೆಗಳೊಂದಿಗೆ ‘ವೇವ್ಸ್’ ತನ್ನ ದೊಡ್ಡ ಸಂಗ್ರಾಹಕ OTT ಆಗಿ ಪ್ರವೇಶಿಸಿದೆ.
ಒಟ್ಟಾರೆಯಾಗಿ 10 ಜಾನಲ್ಗಳ ಇನ್ಫೋಎಂಟರ್ಟೇನ್ಮೆಂಟ್ ಇದರಲ್ಲಿ ಇದರೊಂದಿಗೆ ಅದರೊಂದಿಗೆ ವಿಡಿಯೋ ಆನ್ ಡಿಮಾಂಟ್, ಫ್ರೀ ಟು ಪ್ಲೇ ಗೇಮಿಂಗ್, ರೇಡಿಯೋ ಸ್ಟ್ರೀಮಿಂಗ್, ಲೈವ್ ಟಿವಿ ಸ್ಟ್ರೀಮಿಂಗ್, 65 ಲೈನ್ ಚಾನೆಲ್ಗಳು, ಹಲವಾರು ಆಪ್ ಇಂಟಿಗ್ರೇಷನ್ಗಳು, ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮೂಲಕ ಆನ್ಲೈನ್ ಶಾಪಿಂಗ್ ಬೆಂಬಲಿತ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಕೂಡ ಇದರಲ್ಲಿ ಇರಲಿದೆ.